ಮುಂಬೈ: ಕುಸಿದುಬಿದ್ದ ಮೇಲ್ಸೇತುವೆ
Update: 2018-07-03 23:48 IST
ಮುಂಬೈ: ಪಾದಚಾರಿಗಳ ಮೇಲ್ಸೇತುವೆಯ ಭಾಗವೊಂದು ರೈಲು ಹಳಿಯ ಮೇಲೆ ಕುಸಿದುಬಿದ್ದ ಕಾರಣ ಐವರು ಗಾಯಗೊಂಡ ಘಟನೆ ಅಂಧೇರಿ ರೈಲು ನಿಲ್ದಾಣದಲ್ಲಿ ನಡೆದಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲುಗಳಿಗೆ ವಿದ್ಯುತ್ ಪೂರೈಸುವ ವಯರುಗಳನ್ನು ರೈಲ್ವೇ ಮೇಲ್ಸೇತುವೆಯ ಮೂಲಕ ಸಾಗಿಸಲಾಗಿತ್ತು. ಅಪಘಾತದ ಬಳಿಕ ವಯರುಗಳು ತುಂಡಾಗಿ ಜೋತುಬಿದ್ದ ಕಾರಣ ರೈಲುಗಳು ಅಲ್ಲಲ್ಲಿ ಸ್ಥಗಿತಗೊಂಡಿದ್ದು ರೈಲು ಸಂಚಾರ ಅಸ್ತವ್ಯಸ್ತವಾಗಿದೆ.