ರೈತರ ಸಾಲಮನ್ನಾಗೆ ಶಾಸಕರ ನಿಧಿ ಬಳಕೆಗೆ ಬೇಸರವಿಲ್ಲ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2018-07-04 16:59 GMT

ಮಂಡ್ಯ, ಜು.4: ಬಳಕೆಯಾಗದ ಶಾಸಕರ ನಿಧಿಯನ್ನು ರೈತರ ಸಾಲಮನ್ನಾಗೆ ಬಳಸಿಕೊಳ್ಳುತ್ತಿರುವುದು ಸಂತಸದ ವಿಚಾರ, ಇದಕ್ಕೆ ತಮ್ಮ ಬೇಸರವಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಮದ್ದೂರಿನ ಸೋಮನಹಳ್ಳಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ರೈತರ ಸಾಲಮನ್ನಾವನ್ನು ಘೋಷಣೆ ಮಾಡಲಿದ್ದಾರೆ ಎಂದರು.

ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಚಾರ ಬಜೆಟ್ ಅಧಿವೇಶನದಲ್ಲಿದಲ್ಲಿಯೇ ತಿರ್ಮಾನವಾಗಲಿದೆ. ಸಾರಿಗೆ ಸಂಸ್ಥೆಯು 600 ಕೋಟಿ ನಷ್ಟದಲ್ಲಿದೆ. ಈ ಇಲಾಖೆಯನ್ನು ಆದಾಯದಾಯಕ ಇಲಾಖೆಯನ್ನಾಗಿಸುವ ಹೊಣೆ ನನ್ನ ಮೇಲಿದೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಆಧುನಿಕ ಬಸ್‍ನಿಲ್ದಾಣ ಸ್ಥಾಪನೆ ಮಾಡಲು ಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು ಚರ್ಚಿಸಿ ಮೈಷುಗರ್ ಕಾರ್ಖಾನೆ ಪುನರುಜ್ಜೀವನಗೊಳಿಸಲು ಕ್ರಮವಹಿಸುತ್ತೇವೆ. ತಮಿಳುನಾಡಿಗೆ ನೀರು ಬಿಡುವ ಕುರಿತು ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. 

ಜಿಲ್ಲೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಸ್ಪರ್ಧಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ಲಕ್ಷ್ಮಿ ಅಶ್ವಿನ್‍ಗೌಡ ಅವರ ಸ್ಪರ್ಧೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News