ಮೈಸೂರು: ರೈತರ ಸಾಲ ಮನ್ನಾ ಮಾಡಲು ಸಿಎಂಗೆ 3 ಲಕ್ಷ ದೇಣಿಗೆ ನೀಡಿದ ಅಭಿಮಾನಿ
Update: 2018-07-04 22:32 IST
ಮೈಸೂರು,ಜು.4: ರೈತರ ಸಾಲ ಮನ್ನಾ ಮಾಡಲು ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೂರು ಲಕ್ಷ ದೇಣಿಗೆ ನೀಡಿದ್ದಾರೆ.
ಮೈಸೂರು ಮೂಲದ ಉದ್ಯಮಿ ಸಂತೋಷ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾಲ ಮನ್ನಾ ಮಾಡಲು ಮೂರು ಲಕ್ಷರೂ.ದೇಣಿಗೆ ನೀಡಿದ್ದು, ದೇಣಿಗೆ ಹಣವನ್ನು ಸಾಲ ಮನ್ನಾಗೆ ಬಳಸಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ. ಹಣವನ್ನು ಸಾ.ರಾ.ಮಹೇಶ್ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದು, ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ದೇಣಿಗೆ ನೀಡಿದ್ದನ್ನು ಜೆಡಿಎಸ್ ಕಾರ್ಯಕರ್ತರು ಶ್ಲಾಘಿಸಿದ್ದಾರೆ.