×
Ad

ಮೈಸೂರಿನ ಮಾನಸ ಸರೋವರ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಮಾಹಿತಿ ಇಲ್ಲ: ಜಿಲ್ಲಾಧಿಕಾರಿ

Update: 2018-07-04 22:35 IST

ಮೈಸೂರು,ಜು.4: ಮಾನಸ ಸರೋವರದಲ್ಲಿ ಕರ್ನಾಟಕದ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಈವರೆಗೂ ಮೈಸೂರಿನ ಯಾವುದೇ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಯಾತ್ರೆಗೆ ತೆರಳಿದ್ದ 290 ಮಂದಿ ನೇಪಾಳದ ಸಿಮಿಕೋಟ್‍ನಲ್ಲಿ ಮಳೆಗೆ ಸಿಲುಕಿದ್ದಾರೆ. ಇವರಲ್ಲಿ ಮೈಸೂರಿನ ಯಾತ್ರಿಕರು ಇರುವ ಬಗ್ಗೆ ಮಾಹಿತಿ ಇದೆ. ಆದರೆ ರಾಯಭಾರಿ ಕಚೇರಿಯಿಂದ ಈವರೆಗೂ ಯಾರೊಬ್ಬರ ಹೆಸರು, ವಿಳಾಸದ ಮಾಹಿತಿ ನೀಡಿಲ್ಲ. ಎರಡು ದಿನಗಳಿಂದ ಯಾವೊಬ್ಬ ಕುಟುಂಬ ಸದಸ್ಯರು ಬಂದು ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಆದರೆ ಅಲ್ಲಿರುವ ಎಲ್ಲರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದಲ್ಲಿದ್ದೇವೆ ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News