×
Ad

ಮೈತ್ರಿ ಸರಕಾರದ ಚೊಚ್ಚಲ ಬಜೆಟ್: ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ?

Update: 2018-07-05 18:27 IST

ಬೆಂಗಳೂರು, ಜು.4: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ 2,18,488 ಕೋಟಿ ರೂ.ಗಾತ್ರದ ಚೊಚ್ಚಲ ಬಜೆಟ್ ಅನ್ನು ಗುರುವಾರ ಮಂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿರೀಕ್ಷೆಯಂತೆ ‘ರೈತರ ಬೆಳೆ ಸಾಲ ಮನ್ನಾ’ಗೆ ಆದ್ಯತೆ ನೀಡಿದ್ದು, ಜೊತೆಗೆ ಎಲ್ಲಾ ಕ್ಷೇತ್ರಗಳಿಗೆ ಪೂರಕವಾದ ಕೊಡುಗೆಯನ್ನು ನೀಡಿದ್ದಾರೆ.

ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ದೊರಕಿದ ಕೊಡುಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ..

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ
ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿರುವ ಕನ್ನಡ ಮಾಧ್ಯಮ ತರಗತಿ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ. ಆರಂಭಿಕವಾಗಿ 1 ಸಾವಿರ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಅದೇ ರೀತಿ, ಸರಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ 150 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
* ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್
* ಭಾರತ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರಗಳ ಬಲವರ್ಧನೆಗೆ 5 ಕೋಟಿ ರೂ.
* 1 ಸಾವಿರ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಹೊಸದಾಗಿ ಆರಂಭ
* ಮುಂದಿನ 3 ವರ್ಷದಲ್ಲಿ ಎಲ್ಲ 48 ಸಾವಿರ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಮತು ಮಕ್ಕಳ ಹಾಜರಾತಿಯ ನಿಗಾವಹಿಸಲು ಬಯೋಮೆಟ್ರಿಕ್ ಸಾಧನ ಅಳವಡಿಕೆಗೆ 5 ಕೋಟಿ ರೂ.
* 4,100 ಸರಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಅಂಗನವಾಡಿ ಕೇಂದ್ರಗಳ ಸ್ಥಳಾಂತರ, ಬಾಲ ಸ್ನೇಹಿ ಕೇಂದ್ರಗಳಾಗಿ ಬಲವರ್ಧನೆ
* ಎಲ್‌ಕೆಜಿ, ಯುಕೆಜಿ ತರಗತಿಗಳ ಪ್ರಾರಂಭ
* 1 ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28,847 ಸರಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 8,530 ಸರಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಕ್ರಮ

ಉನ್ನತ ಶಿಕ್ಷಣ
* ಸರಕಾರಿ ಪದವಿ-ಸ್ನಾತಕೋತ್ತರ ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 250 ಕೋಟಿ ರೂ.
* ಹೊಸ ವಿಶ್ವವಿದ್ಯಾಲಯಗಳ ಪ್ರಾರಂಭಕ್ಕೆ 9 ಕೋಟಿ ರೂ.
* ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ, ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ
 * ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾಹಿತಿ ಸಂವಹನ ತಂತ್ರಜ್ಞಾನದ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.
* ಕ್ರೌಡ್ ಫಂಡಿಂಗ್ ಪೋರ್ಟಲ್ ಆರಂಭ-3 ಕೋಟಿ ರೂ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* 108 ಮತ್ತು 104 ತುರ್ತು ವೈದ್ಯಕೀಯ ಸಹಾಯವಾಣಿ ಸೇವೆಗಳ ವ್ಯಾಪ್ತಿಯ ವಿಸ್ತರಣೆ
* ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು- ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳ ಸಂಯೋಜನೆಗೆ ಕ್ರಮ
* ಮುಂದಿನ 2 ವರ್ಷಗಳಲ್ಲಿ ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸಲು 40 ಕೋಟಿ ರೂ. ವೆಚ್ಚದ ಯೋಜನೆ
* ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿಗಾಗಿ ಪ್ರತ್ಯೇಕ ಯೋಜನೆಗೆ 30 ಕೋಟಿ ರೂ.
* ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ, ಆ್ಯಂಕಾಲಜಿ ಆರೋಗ್ಯ ಸೇವೆಯ ಘಟಕ ಹಾಗೂ ಟ್ರಾಮಾ ಘಟಕ ಸ್ಥಾಪನೆ

ವೈದ್ಯಕೀಯ ಶಿಕ್ಷಣ
* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
* ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು 30 ಕೋಟಿ ರೂ.
* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೂಳೆ ಸಂಬಂಧಿತ ಚಿಕಿತ್ಸೆಗಾಗಿ ಪ್ರತ್ಯೇಕ ಘಟಕ ಸ್ಥಾಪಿಸಲು 12 ಕೋಟಿ ರೂ.
* ರಾಮನಗರದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ಬೆಳಗಾವಿ, ಕಲಬುರಗಿ ಮತ್ತು ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್, ಇತರ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ
 * ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಸ್ಥಾಪನೆ-200 ಕೋಟಿ ರೂ.

ಪ್ರವಾಸೋದ್ಯಮ
* ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ; ಕೌಶಲ್ಯ ತರಬೇತಿಗಾಗಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂ.ಗಳ ಷೇರು ಬಂಡವಾಳ ಹೂಡಿಕೆ
* ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ, ಆಹಾರದ ಶುದ್ಧತೆಯನ್ನು ಕಾಪಾಡಲು ಸರಕಾರಿ ಸ್ಥಳೀಯ ಸಂಸ್ಥೆಗಳಿಗೆ 20 ಕೋಟಿ ರೂ.
* ಪ್ರವಾಸೋದ್ಯಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುಂದೆ ಬರುವ ಖಾಸಗಿ ಸಂಸ್ಥೆಗಳಲ್ಲಿ ಶೇ.30ರಷ್ಟು ಷೇರು ಬಂಡವಾಳ ಹೂಡಿಕೆ
* ಕೆಎಸ್‌ಟಿಡಿಸಿ ಸಂಸ್ಥೆಗೆ ಹೊಟೇಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂ.
* ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರಿಗಾಗಿ 3 ಮಾದರಿ ರಸ್ತೆ ಬದಿ ಸೌಲಭ್ಯಗಳ ನಿರ್ಮಾಣ
* ಜಗತ್ಪ್ರಸಿದ್ಧ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯ ಒದಗಿಸಲು 5 ಕೋಟಿ ರೂ.
* ರಾಮನಗರದ ಬಳಿ ಆರ್ಟ್ಸ್ ಅಂಡ್ ಕ್ರಾಫ್ಟ್ ವಿಲೇಜ್ ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ ಚಿಲ್ಡ್ರನ್ಸ್ ವರ್ಲ್ಡ್ ಯೋಜನೆ ಖಾಸಗಿ ಸಹಭಾಗಿತ್ವದೊಂದಿಗೆ ಅಭಿವೃದ್ಧಿ

ಸಮಾಜ ಕಲ್ಯಾಣ
* ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಮಿತಿ 50 ಸಾವಿರ ರೂ. ಗಳಷ್ಟು ಹೆಚ್ಚಳ
* ಸಾಮಾಜಿಕ ಉದ್ಯಮಶೀಲತಾ ಯೋಜನೆಯಡಿ ಎಸ್ಸಿ-ಎಸ್ಟಿಯ 5 ಸಾವಿರ ನಿರುದ್ಯೋಗಿ ಯುವಕ, ಯುವತಿಯರಿಗೆ ಆದಾಯ ಬರುವ ಆರ್ಥಿಕ ಚಟುವಟಿಕೆ ಪ್ರಾರಂಭಿಸಲು ಗರಿಷ್ಠ 10 ಲಕ್ಷ ರೂ. ಆರ್ಥಿಕ ನೆರವು
* ಎಸ್ಸಿ-ಎಸ್ಟಿ ಸಮುದಾಯದ 5 ನಿರುದ್ಯೋಗಿಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ತರಬೇತಿ
* ಕಲಬುರಗಿ ನಗರದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ಎಸ್ಸಿ-ಎಸ್ಟಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗೆ ನೆರವು
* ಎಸ್ಸಿ-ಎಸ್ಟಿ ಹೆಚ್ಚಿರುವ ಕಾಲನಿ, ತಾಂಡಗಳ ಸಮಗ್ರ ಅಭಿವೃದ್ಧಿಗೆ ತಲಾ ಕನಿಷ್ಠ 1 ಕೋಟಿ ರೂ.ಗಳಿಂದ ಗರಿಷ್ಠ 5 ಕೋಟಿ ರೂ.ವರೆಗೆ ಅನುದಾನ ಒದಗಿಸುವ ಪ್ರಗತಿ ಕಾಲನಿ ಯೋಜನೆ ಜಾರಿ
* ಎಸ್ಸಿ-ಎಸ್ಟಿ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲು 2 ಕೋಟಿ ರೂ.
* ಆಯ್ದ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಗಳ ಮಾದರಿ, ನವಗ್ರಾಮಗಳ ನಿರ್ಮಾಣ; ಆದಿವಾಸಿ ಸಮುದಾಯಗಳಿಗೆ ಆದ್ಯತೆ
* ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಟ್ಯಾಕ್ಸಿ, ಹೋಂ ಸ್ಟೇ ಇತರೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ
* ಶಿಳ್ಳೇಕ್ಯಾತ, ದೊಂಬಿದಾಸ, ಗೌಳಿ, ಹೆಳವ, ಶಿಕಾರಿಗಳು, ಹೂವಾಡಿಗ, ಕಂಚುಗಾರ, ಕಮ್ಮಾರ, ದರ್ಜಿ, ದೇವಾಡಿಗ, ಬುಡಬುಡಿಕೆ, ತಿಗಳ, ಬಡಿಗೆ, ಹಟ್ಗಾರ, ಕರೆ ಒಕ್ಕಲಿಗ ಇತ್ಯಾದಿ ಅತ್ಯಂತ ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ 10 ಕೋಟಿ ರೂ.
* ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಧಾರ್ಮಿಕ ಪೀಠಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ.

ಮಠಗಳಿಗೆ 25 ಕೋಟಿ ರೂ
ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಜಾತ್ಯತೀತವಾಗಿ ದಾಸೋಹ, ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿವಿಧ ಮಠಗಳಿಗೂ ಸೇರಿದಂತೆ ಸಂಘ-ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ.ಅನುದಾನ ನೀಡಲಾಗಿದೆ.
ಭಗೀರಥ ಪೀಠ, ಮಾದಾರ ಚೆನ್ನಯ್ಯ ಗುರುಪೀಠ-ಚಿತ್ರದುರ್ಗ, ಸಿದ್ದರಾಮೇಶ್ವರ ಬೋವಿ ಗುರುಪೀಠ-ಚಿತ್ರದುರ್ಗ, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ವಾಲ್ಮೀಕಿ ಗುರುಪೀಠ- ರಾಜನಹಳ್ಳಿ, ಯಾದವ ಮಹಾಸಂಸ್ಥಾನ ಮಠ-ಚಿತ್ರದುರ್ಗ, ನಾರಾಯಣಗುರು ಮಹಾಸಂಸ್ಥಾನ-ನಿಟ್ಟೂರು, ಮಡಿವಾಳ ಗುರುಪೀಠ- ಚಿತ್ರದುರ್ಗ, ದೇವಾಂಗ ಗುರುಪೀಠ ಹಂಪಿ-ಹಡಪದ, ಅಪ್ಪಣ್ಣ ಗುರುಪೀಠ- ಮುದ್ದೇಬಿಹಾಳ, ಕಂಬಾರ ಗುರುಪೀಠ-ಅಥಣಿ, ಛಲವಾದಿ ಜಗದ್ಗುರು ಪೀಠ-ಶಿರಾ. ವಿಜಯಸಂಗಮ ವಿದ್ಯಾಪೀಠ-ಹೊಸದುರ್ಗ, ಶಿವ ಶಕ್ತಿ ಪೀಠ-ಇರಕಲ್ ಮಸ್ಕಿ, ಹೇಮವೇಮ ಸದ್ಬೋಧನ ಪೀಠ-ಹರಿಹರ, ರಾಜ್ಯ ಕುಂಬಾರ ಕ್ಷೇಮಾಭಿವೃದ್ಧಿ, ಗಂಗಾಮತಸ್ಥ, ಮೊಗವೀರ, ಬೆಸ್ತ, ಕೋಲಿ ಸಮಾಜ ಹಾಗೂ ಸವಿತಾ ಸಮಾಜ ಸೇರಿದಂತೆ ಮೊದಲಾದ ಧಾರ್ಮಿಕ ಪೀಠಗಳು ಹಾಗೂ ಸಂ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ಅನುದಾನ ನೀಡಲಾಗಿದೆ.

ಕೃಷಿ ವಲಯಕ್ಕೆ ಬಂಪರ್: ರೈತರ ಸಹಭಾಗಿತ್ವಕ್ಕೆ ಒತ್ತು
ರೈತರ ಸಾಲಮನ್ನಾ ಸೇರಿದಂತೆ ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು ಮೊದಲ ಹಂತದಲ್ಲಿ 150 ಕೋಟಿ ರೂ. ಅನುದಾನ ಸೇರಿದಂತೆ ಇನ್ನಿತರ ಯೋಜನೆಗಳನ್ನು ರಾಜ್ಯ ಸರಕಾರದ ಬಜೆಟ್‌ನಲ್ಲಿ ಘೋಷಿಸಲಾಗಿದೆ.
* ಆಂಧ್ರಪ್ರದೇಶ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿಗೆ ಒತ್ತು ನೀಡುವ ಯೋಜನೆಗೆ 50 ಕೋಟಿ ರೂ. ಅನುದಾನ.
* ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿಪರ ರೈತರನ್ನೊಳಗೊಂಡ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ.
* ಕೃಷಿ ವಲಯದ ವಿವಿಧ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿ ರಚನೆ.
* ರೈತರ ಸಂಘಟನೆ ಹಾಗೂ ಸಾಮರ್ಥ್ಯ ಬಲವರ್ಧನೆಗೆ ರಾಜ್ಯದ ರೈತ ಉತ್ಪಾದಕ ಸಂಸ್ಥೆ (fpo) ನೀತಿ ಜಾರಿಗೆ ಕ್ರಮ.
* ರಾಜ್ಯದೆಲ್ಲೆಡೆ ಅಂಟುವಾಳ ಕಾಯಿ ಮರ ಬೆಳೆಯುವ ಕಾರ್ಯಕ್ರಮಕ್ಕೆ 10 ಕೋಟಿ ರೂ. ಮೀಸಲು.
* ರೈತರಿಗೆ ಸಣ್ಣ ಯಂತ್ರ ಚಾಲಿತ ಎಣ್ಣೆ ಗಾಣಗಳನ್ನು ನೀಡಿ ಶುದ್ಧ ಎಣ್ಣೆ ಪೂರೈಕೆಗೆ ಪ್ರೋತ್ಸಾಹ ಯೋಜನೆಗೆ 5 ಕೋಟಿ ರೂ. ಅನುದಾನ.
* ಧಾರವಾಡ ಕೃಷಿ ವಿವಿ ಅಭಿವೃದ್ಧಿಪಡಿಸಿದ ನಿರ್ವಾತ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು 3 ಕೋಟಿ ರೂ. ಅನುದಾನ.
* ಕೃಷಿಗೆ ಪೂರಕ ತಂತ್ರಜ್ಞಾನ ಆವಿಷ್ಕಾರ ಮಾಡುವ ನವೋದ್ಯಮಗಳಿಗೆ ಉತ್ತೇಜನಕ್ಕೆ 5 ಕೋಟಿ ರೂ. ಅನುದಾನ.
* ಕರ್ನಾಟಕ ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಸಂಸ್ಥೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ.
 * ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಗೆ ಬೀಜ ಪ್ರಮಾಣೀಕರಣ ಮತ್ತು ದೃಢೀಕರಣ ಕೇಂದ್ರವನ್ನು ಸ್ಥಾಪನೆಗೆ 5 ಕೋಟಿ ರೂ. ಅನುದಾನ.

ತೋಟಗಾರಿಕೆ
* ತೋಟಗಾರಿಕಾ ವಲಯಗಳಾದ ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ 5000 ಹೆಕ್ಟೇರ್ ಪ್ರದೇಶದಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ನಿಗದಿ.
* 2017ರ ಬೇಸಿಗೆಯ ಬರಗಾಲದಿಂದ ಸಂಪೂರ್ಣವಾಗಿ ಒಣಗಿ ಅನುತ್ಪಾದಕವಾಗಿರುವ ತೆಂಗಿನ ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ. ಸಹಾಯಧನ.

ರೇಷ್ಮೆ
* ಮೈಸೂರು ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆಗೆ ಪ್ರಸಕ್ತ ಸಾಲಿನಲ್ಲಿ 1 ಕೋಟಿ ರೂ. ಅನುದಾನ.
* ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.
* ರೇಷ್ಮೆ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು 2 ಕೋಟಿ ರೂ. ಅನುದಾನ.
* ಚನ್ನಪಟ್ಟಣದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್‌ಐಸಿ) ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.

ಪಶು ಸಂಗೋಪನೆ
* ಧಾರವಾಡ, ಕಲಬುರಗಿ ಮತ್ತು ಮೈಸೂರಿನಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಮೂರು ವಿಭಾಗ ಮಟ್ಟದ ಘನೀಕೃತ ವೀರ್ಯ ನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆ.
* ಜಲಕೃಷಿ (ಹೈಡ್ರೋಪೋನಿಕ್) ವಿಧಾನದಿಂದ ಹಸಿರು ಮೇವು ಉತ್ಪಾದನಾ ಘಟಕ ಸ್ಥಾಪನೆಗೆ 3 ಕೋಟಿ ರೂ. ಅನುದಾನ.
* ಹಾಸನ ಹಾಲು ಒಕ್ಕೂಟದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ರೂ. ಅನುದಾನ.

ಮೀನುಗಾರಿಕೆ
* ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ ಯೋಜನೆಗೆ 4 ಕೋಟಿ ರೂ. ಅನುದಾನ.

ಸಹಕಾರ
* ‘ಕಾಯಕ’ ಯೋಜನೆಯಡಿ ಸ್ವಸಹಾಯ ಗುಂಪುಗಳು ಸ್ವಯಂ ಉದ್ಯೋಗ ಸ್ಥಾಪಿಸಲು ಗರಿಷ್ಠ 10 ಲಕ್ಷದ ವರೆಗೂ ಸಾಲ ಸೌಲಭ್ಯ. ಈ ಯೋಜನೆಯಡಿ 3 ಸಾವಿರ ಸ್ವಸಹಾಯ ಗುಂಪುಗಳಿಗೆ ಸಾಲ ಒದಗಿಸಲು 5 ಕೋಟಿ ರೂ. ಅನುದಾನ.
* ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು, ಸಣ್ಣವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ (ಮೈಕ್ರೋ ಪೈನಾನ್ಸ್) ಸೌಲಭ್ಯ ಒದಗಿಸಲು ಬಡವರ ‘ಬಂಧು ಸಂಚಾರಿ’ ಸೇವೆ ಪ್ರಾರಂಭ.

ಕೌಶಲ್ಯಾಭಿವೃದ್ಧಿ
* ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ (ಸಿಡಾಕ್) ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿ ನೀಡುವ ‘ದಿಶಾ’ ಯೋಜನೆ ಮೂಲಕ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ 1ಲಕ್ಷ ಜನರಿಗೆ ತರಬೇತಿ ನೀಡಲು 2 ಕೋಟಿ ರೂ. ಅನುದಾನ.
* ವಿದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಯುವ ಜನತೆಗೆ ಅಗತ್ಯ ತರಬೇತಿ ನೀಡಲು ಕರ್ನಾಟಕ ಅಂತಾರಾಷ್ಟ್ರೀಯ ವಲಸಿಗ ಕೇಂದ್ರಕ್ಕೆ 2 ಕೋಟಿ ರೂ.ಅನುದಾನ.

ವಾಣಿಜ್ಯ ತೆರಿಗೆಗಳು - ಸರಕು ಮತ್ತು ಸೇವಾ ತೆರಿಗೆ
* ಎಲ್ಲ ವಿಭಾಗೀಯ ಕಚೇರಿಗಳಲ್ಲಿ ಸ್ವಯಂಚಾಲಿತ ಸರಕು ಮತ್ತು ಸೇವಾ ತೆರಿಗೆ ಸಹಾಯ ಪೀಠ ಸ್ಥಾಪನೆ.
* ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿ ಅನುಭವ ಹೊಂದಿರುವ ಇತರ ದೇಶಗಳಲ್ಲಿ ನಮ್ಮ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲು ಕ್ರಮ.

ಮೌಲ್ಯವರ್ಧಿತ ತೆರಿಗೆ
* ದಿನಾಂಕ 30ನೇ ಅಕ್ಟೋಬರ್ 2018 ರ ಒಳಗಾಗಿ ಪೂರ್ತಿಯಾಗಿ ತೆರಿಗೆ ಮೊತ್ತ ಪಾವತಿಸುವವರಿಗೆ, ಶೇ.100ರಷ್ಟು ದಂಡ ಮತ್ತು ಬಡ್ಡಿ ಮನ್ನಾ ಮಾಡಲು ಒಂದು ಕರ ಸಮಾಧಾನ ಯೋಜನೆ ಜಾರಿ.
* ಕರ್ನಾಟಕ ಮೇಲ್ಮನೆ ನ್ಯಾಯಾಧೀಕರಣವು ಮೇಲ್ಮನಯ ವಿಲೇವಾರಿ ಮಾಡಲು ಇರುವ ಅವಧಿಯನ್ನು ತಡೆಯಾಜ್ಞೆ ಜಾರಿಗೆ ಬಂದ ದಿನದಿಂದ ಮೂರು ವರ್ಷಕ್ಕೆ ವಿಸ್ತರಣೆ.

ಮಾರಾಟ ತೆರಿಗೆ
* ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರ ಶೇ. 2ರಷ್ಟು ಹೆಚ್ಚಳ.
* ಪೆಟ್ರೊಲ್ ಬೆಲೆ ಪ್ರತಿ 1ಲೀ.ಗೆ 1.14 ಪೈಸೆ, ಡೀಸೆಲ್ ಬೆಲೆ ಪ್ರತಿ ಲೀ.1.12ಪೈಸೆ ಹೆಚ್ಚಿಸಲಾಗಿದೆ.

ಅಬಕಾರಿ
* ಅಬಕಾರಿ ಇಲಾಖೆಗೆ 2018-19ನೇ ಸಾಲಿಗೆ 18,750 ಕೋಟಿ ರೂ. ಕಂದಾಯ ಸಂಗ್ರಹಣೆ ಗುರಿ, ಪರಿಷ್ಕೃತ ಕಂದಾಯ 19,750 ಕೋಟಿ ರೂ. ಸಂಗ್ರಹ ಹಾಗೂ ಜೂನ್ 2018 ರ ಅಂತ್ಯಕ್ಕೆ 4,674 ಕೋಟಿ ರೂ.ಗಳ ಸಂಗ್ರಹ ಗುರಿ.
* ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡ 4ರಷ್ಟು ಹೆಚ್ಚಳ.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ: ಪ್ರತಿ ಫಲಾನುಭವಿಗೆ 5 ಕೆ.ಜಿ.ಅಕ್ಕಿ
ಪ್ರಸ್ತುತ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ಫಲಾನುಭವಿಗೆ 7 ಕೆ.ಜಿ. ನೀಡುತ್ತಿದ್ದ ಉಚಿತ ಅಕ್ಕಿಯನ್ನು ಕಡಿತಗೊಳಿಸಿ 5 ಕೆ.ಜಿ ಉಚಿತ ಅಕ್ಕಿ ಮತ್ತು ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ. ತೊಗರಿಬೇಳೆ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆ.ಜಿ. ಪಾಮ್ ಎಣ್ಣೆ, 1 ಕೆ.ಜಿ. ಅಯೋಡಿನ್ ಮತ್ತು ಕಬ್ಬಿಣಾಂಶಯುಕ್ತ ಉಪ್ಪುಹಾಗೂ 1 ಕೆ.ಜಿ. ಸಕ್ಕರೆ ವಿತರಣೆಗೆ ಕ್ರಮ.
* ವರ್ಷಕ್ಕೊಂದು ಬಾರಿ ಆಹಾರ ಸುರಕ್ಷಾ ಮಾಹೆಯನ್ನು ಏರ್ಪಡಿಸಲು ಉದ್ದೇಶಿಸಿದ್ದು, ಅದರಲ್ಲಿ ಪಡಿತರ ಚೀಟಿಗಳನ್ನು ಪರಿಶೀಲಿಸಿ, ಅರ್ಹತೆಯುಳ್ಳವರಿಗೆ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾರ್ಯಕ್ರಮವನ್ನು ಸ್ಥಳೀಯ ಜಾಗೃತ ಸಮಿತಿಯ ಸದಸ್ಯರ ಸಹಕಾರದೊಂದಿಗೆ ಪ್ರತಿ ವರ್ಷವು ಕೈಗೊಳ್ಳಲಾಗುತ್ತದೆ.

ಇಂಧನ ಇಲಾಖೆ
* ವಿದ್ಯುತ್ ಪ್ರಸರಣಾ ಜಾಲ ಬಲವರ್ಧನೆಗೆ 35 ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ 75 ಉಪ ಕೇಂದ್ರ ಮೇಲ್ದರ್ಜೆಗೆ ಏರಿಕೆ.
* ಬೆಂಗಳೂರು ನಗರದಲ್ಲಿ ಎಲ್ಲ overhead ಮಾರ್ಗಗಳನ್ನು ಭೂಗತ ಮಾರ್ಗ(underground cable)ಗಳಾಗಿ ಪರಿವರ್ತಿಸಲು ವಿಸ್ತೃತ ಯೋಜನೆ ತಯಾರಿ ಹಾಗೂ ಹಂತ ಹಂತವಾಗಿ ಅನುಷ್ಠಾನಕ್ಕೆ ಕ್ರಮ.

ಸಾರ್ವಜನಿಕ ಉದ್ದಿಮೆಗಳು
* ಮಾರುಕಟ್ಟೆಯ ಲಿಸ್ಟೆಡ್ ಕಂಪೆನಿಗಳ ಪಟ್ಟಿಗೆ ಲಾಭದಲ್ಲಿರುವ ಮೂರು ಸರಕಾರಿ ಸ್ವಾಮ್ಯದ ಮೂರು ಕಂಪೆನಿಗಳ ಸೇರ್ಪಡೆ.

ವಸತಿ ಇಲಾಖೆ: ಮುಖ್ಯಮಂತ್ರಿ ಲಕ್ಷ ಮನೆ ಯೋಜನೆ ಎಲ್ಲ ನಗರಗಳಿಗೂ ವಿಸ್ತರಣೆ
ಬೆಂಗಳೂರು ನಗರದ ಬಡವರಿಗಾಗಿ ಜಾರಿಗೊಳಿಸಿದ ‘ಮುಖ್ಯಮಂತ್ರಿ ಒಂದು ಲಕ್ಷ ಮನೆಗಳು’ ಯೋಜನೆ ಎಲ್ಲಾ ನಗರಗಳಿಗೆ ವಿಸ್ತರಣೆ ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ.
* ಬೆಂಗಳೂರು ನಗರದಲ್ಲಿ ಬಡವರಿಗೆ ಬಹುಮಹಡಿ ಮನೆಗಳ ನಿರ್ಮಾಣ.
* ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೊಳೆಗೇರಿಗಳ ಅಭಿವೃದ್ಧಿ ಹಾೂ 2019-20 ರಿಂದ ಮಾರ್ಗಸೂಚಿ ಜಾರಿ.
* ವಿಕಲಚೇತನ ಫಲಾನುಭವಿಗಳಿಗೆ ಬೇಡಿಕೆಯ ಮೇರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಪಡೆದು ಮನೆ ಹಂಚಿಕೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
* ಗ್ರಾಮೀಣ ಪ್ರದೇಶಗಳಿಗೆ ಜೀವನದಿ ಅಥವಾ ಜಲಾಶಯಗಳಿಂದ 85 ಎಲ್‌ಪಿಸಿಡಿ ನೀರು ಒದಗಿಸಲು 53,000 ಕೋಟಿ ರೂ.ಗಳ ಜಲಧಾರೆ ಯೋಜನೆಗೆ ಚಾಲನೆ; ಯೋಜನೆಯ ಡಿಪಿಆರ್ ತಯಾರಿಕೆಗೆ ಕ್ರಮ.
* ಶ್ರೀರಂಗಪಟ್ಟಣ ತಾಲೂಕಿನ 29 ಹಳ್ಳಿಗಳಿಗೆ 42.9 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾರಿ.

ಜಲ ಸಂಪನ್ಮೂಲ
* ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಕ್ರಮ.
* ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆ.ಆರ್.ಎಸ್. ಅಭಿವೃದ್ಧಿಗೆ ಕ್ರವು. ಡಿಪಿಆರ್ ತಯಾರಿಕೆಗೆ 5 ಕೋಟಿ ರೂ.ಅನುದಾನ. ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟ ಉದ್ಯಮಿಗಳು ಉತ್ಸುಕ.
* ಮಹದಾಯಿ ನದಿ ವಿವಾದದ ನ್ಯಾಯಾಧಿಕರಣ ತೀರ್ಪು ಆಗಸ್ಟ್ 2018 ರಲ್ಲಿ ಬರುವ ನಿರೀಕ್ಷೆ; ತೀರ್ಪಿನ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ.
* ಕೃಷ್ಣಮೇಲ್ದಂಡೆ ಯೋಜನೆ 3 ನೆ ಹಂತದ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾರ್ಯಕ್ಕೆ ಚುರುಕು. ಹಾಗೂ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಣ್ಣ ನೀರಾವರಿ
* ಹಾಸನ ತಾಲೂಕು ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳಿಗೆ 70 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿ.
* ಲೋಕಪಾವನಿ ನದಿಯಿಂದ ಮಂಡ್ಯ ಜಿಲ್ಲೆಯ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಮಂಡ್ಯ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 30 ಕೋಟಿ ರೂ.ಗಳ ಅನುದಾನ.
* ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣ ನದಿಯಿಂದ 10

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News