ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ನೇಹಿತರಿದ್ದಂತೆ: ಶಾಸಕ ಟಿ.ಡಿ.ರಾಜೇಗೌಡ

Update: 2018-07-08 13:03 GMT

ಎನ್.ಆರ್.ಪುರ, ಜು.8: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ನೇಹಿತರಿದ್ದಂತೆ ಎಂದು ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಆಡಳಿತ ವರ್ಗ ಹಾಗೂ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದಎಲ್ಲಾ ಭಾಗದ ಸಮಸ್ಯೆಗಳನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿ.ಪಂ. ತಾ.ಪಂ. ಹಾಗೂ ತಾಲೂಕಿನ ಎಲ್ಲಾ ಗ್ರಾ.ಪಂನ ಎಲ್ಲಾ ಪಕ್ಷದ ಚುನಾಯಿತ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುತ್ತೇನೆ. ನಾನು ಕ್ಷೇತ್ರದ ಎಲ್ಲಾ ಜನರ ಶಾಸಕನಾಗಿದ್ದೇನೆ. ನಾನು ಹೊಸ ರಾಜಕಾರಣಿಯೇನಲ್ಲ. ನನಗೂ ರಾಜಕೀಯದ ಬಗ್ಗೆ ಅರಿವಿದೆ. ಹಿಂದೆ ಜಿ.ಪಂ. ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ. ಈಗಲೂ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಎಲ್ಲರನ್ನೂ ಒಟ್ಟಗೂಡಿಸಿಕೊಂಡು ಕ್ಷೇತ್ರದ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.

ತಾ.ಪಂ .ಅಧ್ಯಕ್ಷೆ ಈ.ಸಿ ಜಯಶ್ರೀ ಮೋಹನ ಮಾತನಾಡಿ, ಈ ಹಿಂದಿನ ಶಾಸಕರು ಅಭಿವೃಧ್ಧಿಗೆ ನೀಡಿದ ಸಹಕಾರದಂತೆಯೇ ಈಗಿನ ನೂತನ ಶಾಸಕರ ಬಳಿ ಸಹಕರವನ್ನು ಕೋರುತ್ತೇವೆ. ಅಭಿವೃಧ್ಧಿ ಕಾರ್ಯಗಳಿಗೆ ಸಹಕರಿಸುತ್ತಾರೆ ಎಂಬ ಭರವಸೆ ಇದೆ. ಅವರೊಂದಿಗೆ ಜನಪ್ರತಿನಿಧಿಗಳಾದ ನಾವೂ ಕೂಡ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆಂದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್‍ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಚಂದ್ರಮ್ಮ, ತಾ.ಪಂ. ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ಸದಸ್ಯರುಗಳಾದ ಪ್ರೇಮಾ, ಪ್ರವೀಣ್, ಮೀನಾಕ್ಷಿ ಕಾಂತರಾಜ್, ಪ್ರೇಮಾ, ಸುಧಾಕರ್‍ ಆಚಾರ್, ಇಓ ಪ್ರಕಾಶ್‍ ವಡ್ಡರ್, ತಹಸೀಲ್ದಾರ್ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News