ಎಂಜಿಆರ್ ದಕ್ಷಿಣ ಭಾರತದ ಮೇರು ಪ್ರತಿಭೆ: ಎಚ್.ಡಿ.ದೇವೇಗೌಡ

Update: 2018-07-08 14:47 GMT

ಬೆಂಗಳೂರು, ಜು.8: ಸಿನೆಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಎಂ.ಜಿ.ರಾಮಚಂದ್ರನ್(ಎಂಜಿಆರ್) ದಕ್ಷಿಣ ಭಾರತದ ಮೇರು ಪ್ರತಿಭೆಯೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಣ್ಣಿಸಿದರು.

ರವಿವಾರ ಕರ್ನಾಟಕ ಅಣ್ಣಾ ಡಿಎಂಕೆ ನಗರದ ಪುರಭವನದಲ್ಲಿ ಆಯೋಜಿಸಿದ್ದ ಭಾರತ ರತ್ನ ಡಾ.ಎಂಜಿಆರ್‌ರವರ 101ನೆ ಜನ್ಮದಿನಾಚರಣೆ ಮತ್ತು ಲೇಖಕ ಕೆ.ಆರ್.ಕೃಷ್ಣರಾಜರವರ ‘ಭಾರತ ರತ್ನ ಡಾ.ಎಂಜಿಆರ್’ ಹಾಗೂ ‘ಅಮ್ಮನ ಸಾಧನೆಯ ಕ್ರಾಂತಿ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಿನೆಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಎಂಜಿಆರ್ ಮಾಡಿರುವ ಸಾಧನೆ ಅನುಕರಣೀಯವಾದದ್ದು. ಅವರ ಜನಪ್ರಿಯತೆ ಕೇವಲ ತಮಿಳುನಾಡಿಗೆ ಸೀಮಿತವಾಗದೆ ದೇಶಾದ್ಯಂತ ಹರಡಿದೆ. ಅವರ ಕೋಟ್ಯಂತರ ಅಭಿಮಾನಿಗಳು ಇವತ್ತಿಗೂ ಅವರ ವ್ಯಕ್ತಿತ್ವವನ್ನು ಅನುಕರಿಸುತ್ತಾರೆ. ಹೀಗಾಗಿ ಅವರನ್ನು ದಕ್ಷಿಣ ಭಾರತದ ಸಾಂಸ್ಕೃತಿಕ ನಾಯಕನೆಂದರೆ ತಪ್ಪಾಗಲಾರದು ಎಂದು ಅವರು ಪ್ರಶಂಸಿದರು.

ನಾನು ಎಂಜಿಆರ್ ಅವರನ್ನು ಎರಡು ಬಾರಿ ಭೇಟಿ ಆಗಿದ್ದೇನೆ. ರಾಮಕೃಷ್ಣ ಹೆಗಡೆ ಸರಕಾರದಲ್ಲಿ ನೀರಾವರಿ ಸಚಿವನಾಗಿದ್ದಾಗ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಅವರ ವ್ಯಕ್ತಿತ್ವ ಯಾರಿಗೂ ಮನಸೂರೆಗೊಳ್ಳುವಂತಹದ್ದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಜಿಆರ್ ಅವರಂತೆ ವೇಷ ಧರಿಸಿದ್ದ 101 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ವಿಧಾನಪರಿಷತ್ ಸದಸ್ಯ ಶರವಣ, ಹಿರಿಯ ನಟಿ ಬಿ.ಸಾಹುಕಾರ್ ಜಾನಕಿ, ಕರ್ನಾಟಕ ಅಣ್ಣಾ ಡಿಎಂಕೆಯ ರಾಜ್ಯ ಕಾರ್ಯದರ್ಶಿ ಕೆ.ಆರ್.ಕೃಷ್ಣರಾಜು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News