ಮಂಡ್ಯ: ಮೂವರು ಬೈಕ್ ಕಳ್ಳರ ಬಂಧನ
Update: 2018-07-08 21:44 IST
ಮಂಡ್ಯ, ಜು.8: ಪಾಂಡವಪುರ ಪೊಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಬಾಲಕರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಪಾಂಡವಪುರ ಸುತ್ತಮುತ್ತಲಿನ ಗ್ರಾಮದವರಾಗಿದ್ದು, ಬಾಲಾಪರಾಧಿಗಳಾಗಿರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸಿಲ್ಲ.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪ, ಬಿಜಿಎಸ್ ಶಾಲೆ, ಚಿಕ್ಕಾಡೆ ಹಾಗೂ ಬೇಬಿಬೆಟ್ಟದ ಜಾತ್ರೆ, ಚಂದ್ರೆ ಗ್ರಾಮದಲ್ಲಿ ಬೈಕ್‍ಗಳನ್ನು ಕಳವು ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ.
ಕಳ್ಳರು ಮಾರಾಟ ಮಾಡಿದ್ದ ಎಲ್ಲಾ ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಾಲ ನ್ಯಾಯಮಂಡಳಿಗೆ ಒಪ್ಪಿಸಿದ್ದಾರೆ.