ಓ ಮೆಣಸೇ...

Update: 2018-07-08 18:32 GMT

ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿದ್ದರೆ ಸಾಕು, ಹಿಂದಿನಿಂದ ಚೂರಿ ಹಾಕುವವರು ಬೇಡ

- ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ

ಪ್ರಾಮಾಣಿಕವಾಗಿ ಮುಂದಿನಿಂದ ಚೂರಿ ಹಾಕಲು ಕಾರ್ಯಕರ್ತರಿಗೆ ಕರೆ ಕೊಡುತ್ತಿರುವಂತಿದೆ.

---------------------

ಎಲ್ಲಿ ಶ್ರಮವಿರುತ್ತದೋ ಅಲ್ಲಿ ಫಲವಿರುತ್ತದೆ

- ಡಿ.ಕೆ.ಶಿವಕುಮಾರ್, ಸಚಿವ

ಅದರ ಫಲವನ್ನು ಸಚಿವರಾಗಿ ಅನುಭವಿಸುತ್ತಿದ್ದೀರಿ.

---------------------

ರಾಜಕಾರಣದಿಂದ ಸರಕಾರ ನಡೆಸಲು ಸಾಧ್ಯವಿಲ್ಲ

- ಡಿ.ಸಿ. ತಮ್ಮಣ್ಣ , ಸಚಿವ

ಹಣದಿಂದ ಸರಕಾರ ರಚಿಸಲು ಸಾಧ್ಯವಿದೆ.

---------------------

ಕಾನೂನಿನಿಂದ ಯಾವುದೇ ಭ್ರಷ್ಟಾಚಾರ, ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ

- ಯು.ಟಿ.ಖಾದರ್, ಸಚಿವ

ಕಾನೂನನ್ನು ತೆಗೆದುಹಾಕಬೇಕು ಎಂದು ಹೇಳುತ್ತಿದ್ದೀರಿ.

---------------------

ಜಿಎಸ್‌ಟಿ ಆರೆಸ್ಸೆಸ್ ತೆರಿಗೆಯಾಗಿದೆ

-ಪಿ.ಚಿದಂಬರಂ, ಮಾಜಿ ಸಚಿವ

ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಆ ತೆರಿಗೆಯನ್ನು ಉದ್ಘಾಟಿಸಲು ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿರಬೇಕು.

---------------------

ಹಾಲಿಗೂ, ಬೆಂಝ್ ಕಾರಿಗೂ ಒಂದೇ ರೀತಿಯ ತೆರಿಗೆ ಹಾಕಲು ಸಾಧ್ಯವಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಅಂದರೆ ಬೆಂಝ್ ಕಾರಿಗಿಂತ ಹಾಲಿಗೆ ಹೆಚ್ಚು ತೆರಿಗೆ ಹಾಕುವ ಉದ್ದೇಶವೇ?
---------------------

ಮಂಗಗಳು ನಮ್ಮ ಪೂರ್ವಜರಲ್ಲ

- ಸತ್ಯಪಾಲ್ ಸಿಂಗ್, ಕೇಂದ್ರ ಸಚಿವ

ನೀವು ಮಾಡುತ್ತಿರುವ ಅನಾಹುತ ನೋಡಿದರೆ ಮಂಗಗಳೇ ‘ನಾವು ಅವರ ಪೂರ್ವಜರಲ್ಲ’ ಎಂದು ಹೇಳುವಂತಿದೆ.

---------------------
 
ಸಮಾಜವನ್ನು ಒಗ್ಗೂಡಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ

- ನಳಿನ್ ಕುಮಾರ್ ಕಟೀಲು, ಸಂಸದ ಮತ್ತು ಬೆಂಕಿ ಹಚ್ಚುವ ಜವಾಬ್ದಾರಿ ನಿಮ್ಮದೇ?
---------------------

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದಬಾರದು

- ವಿನಯ ಕುಮಾರ್ ಸೊರಕೆ, ಮಾಜಿ ಸಚಿವ

ಅವರ ಆತಂಕವೆಲ್ಲ ತಮ್ಮ ನಾಯಕರ ಕುರಿತಂತೆ.

---------------------

ಇನ್ನೊಂದು ಧರ್ಮವನ್ನು ಪ್ರೀತಿಸುತ್ತೇನೆ ಎನ್ನುವುದು ಬಿಟ್ಟರೆ ನನ್ನ ಮೇಲೆ ಯಾವ ಆರೋಪಗಳೂ ಇಲ್ಲ

- ರಮಾನಾಥರೈ, ಮಾಜಿ ಸಚಿವ

ಈಗ ಚುನಾವಣೆಯಲ್ಲಿ ‘ದ್ವೇಷ’ಕ್ಕಷ್ಟೇ ಬೆಲೆ.
---------------------

ರಾಜಕೀಯದಲ್ಲಿ ಹೆಣ್ಣು ಅಳಿವಿನಂಚಿನ ಜೀವಿ ಇದ್ದಂತೆ

- ತೇಜಸ್ವಿನಿ ಗೌಡ, ಬಿಜೆಪಿ ನಾಯಕಿ
ಅಳಿವಿನಂಚಿನಲ್ಲಿರುವ ಜೀವಿಯ ಅಳಲು.

---------------------

ಸಿದ್ದರಾಮಯ್ಯ ರೈಟ್ ಹೇಳದೆ ಎಚ್ಡಿಕೆ ಸರಕಾರ ಚಲಿಸದು

- ಆಯನೂರು ಮಂಜುನಾಥ್, ವಿ.ಪ. ಸದಸ್ಯ

ಅಂತೂ ಅವರನ್ನು ಬಸ್‌ ಕಂಡಕ್ಟರ್ ಸ್ಥಾನಕ್ಕೆ ಇಳಿಸಿದಿರಿ.

---------------------

ಚುನಾವಣಾ ಪೂರ್ವ ಮಹಾಮೈತ್ರಿ ಸಂಭವಿಸುವ ಸಾಧ್ಯತೆಯಿಲ್ಲ

- ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಚುನಾವಣೆಯನಂತರದ ಸೋಲಿನ ಬಳಿಕ ಆ ಬಗ್ಗೆ ಚಿಂತಿಸಬಹುದು.

---------------------

ಇತ್ತೀಚಿನ ದಿನಗಳಲ್ಲಿ ಜಾತಿ ರಾಜಕಾರಣ ತುಂಬಾ ಹೊಲಸಾಗಿ ಬಿಟ್ಟಿದೆ

- ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

ಆ ಹೊಲಸಿನಲ್ಲೇ ತಾನೇ ತಾವು ಸಚಿವರಾಗಿ ಅರಳಿದ್ದು.

---------------------

ಸಮಯ ಬಂದಾಗ ವೌನ ಮುರಿಯುವೆ

- ಎಚ್. ಡಿ. ದೇವೇಗೌಡ, ಮಾಜಿ ಪ್ರಧಾನಿ
ಮೈತ್ರಿ ಮುರಿಯುವ ಸಮಯ ಬಂದಾಗಲೇ?

---------------------

ಪಿಡಿಪಿ-ಕಾಂಗ್ರೆಸ್ ಎರಡೂ ಉಗ್ರರ ಪರವಿರುವ ಪಕ್ಷಗಳು

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಪಿಡಿಪಿಯ ಜೊತೆಗೆ ಬಿಜೆಪಿ ಮೈತ್ರಿ ಮಾಡಿದ್ದು, ಇಷ್ಟು ಬೇಗ ಜನರು ಮರೆಯಲಾರರು.

---------------------

ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ್ದ ಇಟ್ಟಿಗೆಗಳನ್ನು ಬಿಜೆಪಿಯವರು ತಿಪ್ಪೆಗುಂಡಿಗೆ ಎಸೆದಿದ್ದಾರೆ

- ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಮಮಂದಿರ ಕಟ್ಟುವುದರ ಬಗ್ಗೆ ನಿಮಗೇಕೆ ಇಷ್ಟು ಆಸಕ್ತಿ?

---------------------

ತಾಳಿ ಕಟ್ಟಿಯಾಗಿದೆ. ಸಂಸಾರ ಶುರುವಾಗಿದೆ. ಸಂಸಾರವನ್ನು ಹಾಳು ಮಾಡಬೇಡಿ

- ಸಿಎಂ ಇಬ್ರಾಹೀಂ, ಕಾಂಗ್ರೆಸ್ ನಾಯಕ

ಪ್ರಸ್ಥ ಇನ್ನೂ ನಡೆದೇ ಇಲ್ಲ ಎನ್ನುವುದೇ ಎಲ್ಲಕ್ಕೂ ಕಾರಣ.

---------------------

ಮುಖ್ಯಮಂತ್ರಿ ಕುಮಾರಸ್ವಾಮಿ ಸಾಕಷ್ಟು ಸರ್ಕಸ್ ಮಾಡಿ ಬಜೆಟ್ ಮಂಡಿಸಿದ್ದಾರೆ

- ಎಚ್. ವಿಶ್ವನಾಥ್, ಶಾಸಕ

ಅವರು ಮಂಡಿಸಿದ್ದು ಹಾಸನ ರಾಜ್ಯದ ಬಜೆಟ್.

---------------------

ಬಜೆಟ್ ಮಂಡಿಸುವ ಮೂಲಕ ಸಿಎಂ ಕುಮಾರಸ್ವಾಮಿ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ನಡೆಸಿದ್ದಾರೆ

- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
ನಿಮ್ಮದು ಏಣಿ ಬೀಳಿಸುವ ಪ್ರಯತ್ನವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...