ಅಮಿತ್ ಶಾ ಚೆನ್ನೈಗೆ ಆಗಮಿಸುತ್ತಲೇ #GobackAmitShah ಹ್ಯಾಶ್ ಟ್ಯಾಗ್ ಟ್ರೆಂಡಿಂಗ್

Update: 2018-07-09 06:55 GMT

ಚೆನ್ನೈ, ಜು.9: ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಲು ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚೆನ್ನೈಗೆ ಆಗಮಿಸುತ್ತಿರುವಂತೆಯೇ ಟ್ವಿಟರ್ ನಲ್ಲಿ #GobackAmitShah ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಬೆಳಗ್ಗೆ ಹೊತ್ತಿಗಾಗಲೇ #GobackAmitShah  ಹ್ಯಾಶ್ ಟ್ಯಾಗ್ ಬಳಸಿ 72 ಸಾವಿರಕ್ಕೂ ಅಧಿಕ ಟ್ವೀಟ್ ಹಾಗು ರಿಟ್ವೀಟ್ ಗಳಾಗಿವೆ. "ತಮಿಳುನಾಡು ಸಮಾನತೆಯ ನಾಡು, ನಿಮ್ಮಂತಹ ಉಗ್ರರು ಬರಲು ನಾವು ಅನುಮತಿಸುವುದಲ್ಲ" ಎಂದು @iam_jafeth  ಎನ್ನುವ ಖಾತೆಯು ಟ್ವೀಟ್ ಮಾಡಿದೆ. "ಅಮಿತ್ ಶಾ, ಇಂದು ತಮಿಳುನಾಡು ಇಂಡಿಯಾವಲ್ಲ. ಪ್ರಜಾಪ್ರಭುತ್ವದ ಜೂಜುಕೋರರನ್ನು ನಾವು ಅನುಮತಿಸುವುದಿಲ್ಲ" ಎಂದು @piraikannan ಎನ್ನುವ ಖಾತೆ ಟ್ವೀಟ್ ಮಾಡಿದೆ.

"ತೂತುಕುಡಿ ಗುಂಡಿನ ದಾಳಿ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆಯೇ?, ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾಗಿ ಅವರಿಗೆ ನೈತಿಕ ಹೊಣೆಯಿಲ್ಲವೇ? #GobackAmitShah " ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಎಪ್ರಿಲ್ ನಲ್ಲಿ ಪ್ರಧಾನಿ ಮೋದಿ ನಗರಕ್ಕೆ ಭೇಟಿ ನೀಡಿದಾಗಲೂ ಟ್ವಿಟರ್ ನಲ್ಲಿ ಇದೇ ರೀತಿಯ ಪ್ರತಿಭಟನೆ ನಡೆದಿತ್ತು. #GobackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News