ಕೊಡಗಿನ ಭೂಕಂಪನದ ತೀವ್ರತೆ ಮಾಪಕದಲ್ಲಿ ದಾಖಲಾಗಿಲ್ಲ: ಭೂ ವಿಜ್ಞಾನಿ ರೇಷ್ಮ ಸ್ಪಷ್ಟನೆ

Update: 2018-07-09 14:29 GMT

ಮಡಿಕೇರಿ, ಜು.9: ಕೊಡಗು ಜಿಲ್ಲೆಯಲ್ಲಿ ಕಂಡು ಬಂದ ಭೂಕಂಪನ 1 ಮ್ಯಾಗ್ನಿಟ್ಯೂಡ್‍ಗಿಂತ ಕಡಿಮೆ ಇರುವುದರಿಂದ ಭೂಕಂಪನದ ತೀವ್ರತೆ ಮಾಪಕದಲ್ಲಿ ದಾಖಲಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಇಂತಹ ಘಟನೆ ಸಂಭವಿಸಿರುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳಲ್ಲಿ ಯಾವುದೇ ಅನಾಹುತಗಳಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಸೆಂಟರ್ ಅಧಿಕಾರಿಗಳು ಸ್ಪಷ್ಪಡಿಸಿರುವುದಾಗಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮಾ ಅವರು ಸ್ಪಷ್ಟಪಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2013ರಲ್ಲೂ ಇದೇ ರೀತಿಯ ಘಟನೆ ಸಂಭವಿಸಿದ್ದರೂ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಜಿಲ್ಲೆಯಲ್ಲಿ ಹಾರಂಗಿಯಲ್ಲಿ ಭೂಕಂಪನ ಮಾಪಕವಿದ್ದರೂ, ಅದು ಕಾರ್ಯಾಚರಿಸುತ್ತಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಕೊಡಗಿನಲ್ಲಿ ಭೂಕಂಪನ ಉಂಟಾದಲ್ಲಿ ಅದರ ತೀವ್ರತೆಯನ್ನು ತಿಳಿಯಲು ಬೆಂಗಳೂರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News