ಸೊರಬ: ಮಗುಚಿ ಬಿದ್ದ ಟ್ರಾಕ್ಟರ್; ಚಾಲಕ ಸ್ಥಳದಲ್ಲೇ ಮೃತ್ಯು

Update: 2018-07-09 17:42 GMT

ಸೊರಬ, ಜು.9 : ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರೊಂದು ರಸ್ತೆ ಪಕ್ಕದ ಕೆರೆಗೆ ಮಗುಚಿ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿ ಕೋಟೆಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕೆರೆಹಳ್ಳಿ ಗ್ರಾಮದ ನಿವಾಸಿ ಮೈಲಾರಪ್ಪಎಂಬವರ ಪುತ್ರ ನವೀನ್(19) ಎಂದು ಗುರುತಿಸಲಾಗಿದೆ.

ಬೇಸಾಯ ಮಾಡುವ ನಿಮಿತ್ತ ತಮ್ಮ ಹೊಲದ ಕಡೆ ನವೀನ ತನ್ನ ಟ್ರಾಕ್ಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ ಅಚಾನಕ್ಕಾಗಿ ನವೀನ ಟ್ರಾಕ್ಟರ್‌ನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಟ್ರಾಕ್ಟರ್ ರಸ್ತೆ ಬದಿಯಲ್ಲಿದ್ದ ಕೆರೆಗೆ ಮಗುಚಿ ಬಿದ್ದಿದೆ. ಈ ವೇಳೆ ನವೀನ್ ಟ್ರಾಕ್ಟರ್ ಅಡಿ ಭಾಗದಲ್ಲಿ ಸಿಲುಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News