×
Ad

​ಮೂಡಿಗೆರೆ: ಬಿ.ಎ ಮೊಹಿದಿನ್ ನಿಧನಕ್ಕೆ ಜಿಲ್ಲಾ ಬ್ಯಾರಿಗಳ ಒಕ್ಕೂಟ ಸಂತಾಪ

Update: 2018-07-10 18:20 IST

ಮೂಡಿಗೆರೆ, ಜು.10: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಮಾರ್ಪಾಡು ತಂದಿದ್ದ ಹಿರಿಯ ಮುತ್ಸದ್ದೀ, ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ನಿಧನಕ್ಕೆ ಜಿಲ್ಲಾ ಬ್ಯಾರಿಗಳ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಸಿ.ಕೆ.ಇಬ್ರಾಹಿಂ, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್ ಮತ್ತು ಮಾಜಿ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್ ಅವರು, ಜೆ.ಎಸ್ ಪಟೇಲ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಮೇಲ್ದರ್ಜೆಗೆ ಕಾಯಕಲ್ಪ ನೀಡಿದ್ದರು. ಬ್ಯಾರಿ ಪಂಗಡದ ಎಲ್ಲಾ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಮೊಹಿದಿನ್ ಅವರು, ಬ್ಯಾರಿ ಭಾಷೆ ಬೆಳೆವಣಿಗೆಗೆ ಹಲವು ರೀತಿಯ ಸೂತ್ರಗಳನ್ನು ಸಲಹೆ ರೂಪದಲ್ಲಿ ಬ್ಯಾರಿ ಅಕಾಡೆಮಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು. 

2015, ಜ.10ರಂದು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ನಡೆದ ಬ್ಯಾರಿ ಸಮ್ಮೇಳನ ಮತ್ತು ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಮ್ಮೇಳನ ಯಶಸ್ಸು ಕಾಣಲು ಕಾರಣರಾಗಿದ್ದರು. ಬಿ.ಎ.ಮೊಹಿದಿನ್ ಅವರ ನಿಧನದಿಂದ ಬ್ಯಾರಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News