×
Ad

ಹಿರಿಯ ಮುತ್ಸದ್ದಿ ಬಿ.ಎ ಮೊಹಿದಿನ್ ನಿಧನ: ಡಿಸಿಎಂ ಪರಮೇಶ್ವರ್ ಸಂತಾಪ

Update: 2018-07-10 19:58 IST

ಬೆಂಗಳೂರು, ಜು.10: ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್  ಸಂತಾಪ ವ್ಯಕ್ತಪಡಿಸಿದ್ದಾರೆ.

‘ಇಂದು ನಮ್ಮನ್ನು ಅಗಲಿರುವ ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರು ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಪ್ರಾಮಾಣಿಕ ಮತ್ತು ಸರಳ ಜೀವಿಯಾಗಿದ್ದರು. ಅಧಿಕಾರ ಗಿಟ್ಟಿಸಿಕೊಳ್ಳಬೇಕು, ಆಸ್ತಿ ಮಾಡಬೇಕು ಎನ್ನುವ ಮನಸ್ಥಿತಿ ಅವರಲ್ಲಿರಲಿಲ್ಲ. ಅಧಿಕಾರ ಇದ್ದಾಗಲು, ಇಲ್ಲದಾಗಲೂ ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದರೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಶಿಕ್ಷಣ ಸಚಿವರಾದಾಗ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬಹಳ ಒತ್ತು ನೀಡಿದ್ದರು. ಜಾತಿ, ಧರ್ಮ ಮೀರಿ ನಡೆದುಕೊಂಡವರು' ಎಂದು ಪರಮೇಶ್ವರ್ ಸಂತಾಪ ವ್ಯಕ್ತಪಡಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News