ಥಾಯ್ಲೆಂಡ್: 'ಆಪರೇಶನ್ ಸಕ್ಸಸ್'
Update: 2018-07-10 23:36 IST
ಕಳೆದ ಎರಡು ವಾರದಿಂದ ಉತ್ತರ ಥಾಯ್ಲೆಂಡಿನ ಜಲಾವೃತ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಫುಟ್ಬಾಲ್ ಕೋಚ್ ಹಾಗೂ 12 ಬಾಲಕರನ್ನು ರಕ್ಷಿಸುವ ಕಾರ್ಯ ಮಂಗಳವಾರ ಸಂಪೂರ್ಣಗೊಂಡಿದ್ದು ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಥಾಯ್ಲೆಂಡ್‌ನ ನೌಕಾಪಡೆಯ 'ಸೀಲ್' ವಿಭಾಗದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ತಿಳಿಸಲಾಗಿದೆ. ಎಲ್ಲಾ 12 'ಕಾಡುಹಂದಿ'ಗಳು ಹಾಗೂ ಕೋಚ್ ಗುಹೆಯಿಂದ ಹೊರಬಂದಿದ್ದು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಲಾಗಿದೆ. (ವೈಲ್ಡ್‌ಬೋರ್ಸ್) 'ಕಾಡು ಹಂದಿಗಳು' ಎಂಬುದು ಈ ಬಾಲಕರು ಆಡುತ್ತಿದ್ದ ಫುಟ್ಬಾಲ್ ತಂಡದ ಹೆಸರಾಗಿದೆ.