ದಾವಣಗೆರೆ: ಕುಡುಕುನ ಬಳಿ ಪತ್ತೆಯಾದ ನೂರಾರು ಆಧಾರ್ ಕಾರ್ಡ್ ಗಳು

Update: 2018-07-11 17:11 GMT

ದಾವಣಗೆರೆ,ಜು.11: ನಗರದ ಪಿಬಿ ರಸ್ತೆಯ ಭವಾನಿ ಬಾರ್ ಎದುರು ನೂರಾರು ಆಧಾರ್ ಕಾರ್ಡ್‍ಗಳು ಪತ್ತೆಯಾದ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿ ಮೈಮೇಲೆ ಎಚ್ಚರವಿಲ್ಲದಂತೆ ಬಿದ್ದಿದ್ದ ವ್ಯಕ್ತಿಯ ಚೀಲದಿಂದ ರಾಶಿಗಟ್ಟಲೇ ಆಧಾರ್ ಗಳು ಪತ್ತೆಯಾಗಿದ್ದು, ಅಮಲಿನಲ್ಲಿ ಮೈಮರೆತು ಮಲಗಿದ್ದ ವ್ಯಕ್ತಿಯ ಬ್ಯಾಗ್ ತೆಗೆದು, ಆತನ ವಿಳಾಸ ಹುಡಕಲು ಮುಂದಾದಾಗ ಚೀಲದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‍ಗಳು ಪತ್ತೆಯಾಗಿವೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಬಳಿ ಪತ್ತೆಯಾದ ಆಧಾರ್ ಕಾರ್ಡ್ ಅಸಲಿಯೋ ಅಥವಾ ನಕಲಿಯೋ ಎಂಬ ಅನುಮಾನ ವ್ಯಕ್ತವಾಗಿದೆ.

ಕುಡುಕನ ಚೀಲದಲ್ಲಿ ಪತ್ತೆಯಾದ ಆಧಾರ್ ಕಾರ್ಡ್‍ಗಳನ್ನು ಪರಿಶೀಲಿಸಿದಾಗ ಅನೇಕರ ಹೆಸರು, ವಿಳಾಸದ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಬಾರ್ ಬಳಿ ಎಚ್ಚರವಿಲ್ಲದೇ ಬಿದ್ದವನ ಬಳಿ ಇಷ್ಟೊಂದು ಆಧಾರ್ ಕಾರ್ಡ್ ಬಂದಿದ್ದು ಹೇಗೆಂಬ ಪ್ರಶ್ನೆಯೂ ಜನರಿಂದ ಕೇಳಿ ಬಂತು. ತಕ್ಷಣವೇ ಮೊಬೈಲ್‍ನಲ್ಲಿ ಆ ಎಲ್ಲಾ ದೃಶ್ಯವನ್ನು ವೀಡಿಯೋ ಮಾಡಿಕೊಂಡು, ಫೋಟೋ ತೆಗೆದುಕೊಂಡ ಜನರು ವಾಟ್ಸಪ್, ಫೇಸ್‍ಬುಕ್‍ನಲ್ಲಿ ಹರಿಯಬಿಟ್ಟಿದ್ದಾರೆ. 

ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಅಮಲಿನಲ್ಲಿದ್ದ ವ್ಯಕ್ತಿ ಮಾತ್ರ ಎಚ್ಚರಗೊಂಡಿಲ್ಲ. ಅಷ್ಟೊಂದು ಆಧಾರ್ ಕಾರ್ಡ್ ಸಿಕ್ಕಿದ್ದರಿಂದಾಗಿ ನಕಲಿ ಆಧಾರ್ ಕಾರ್ಡ್ ಮಾಡುವ ಜಾಲವೇನಾದರೂ ಸಕ್ರಿಯವಾಗಿದೆಯೇ ಎಂಬ ಅನುಮಾನವೂ ಜನರನ್ನು ಈಗ ಕಾಡುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News