ಚಿಕ್ಕಮಗಳೂರು: ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಿರಿಗಯ್ಯ ನೇಮಕ

Update: 2018-07-11 18:13 GMT

ಚಿಕ್ಕಮಗಳೂರು, ಜು.11: ಜಿಲ್ಲಾಪಂಚಾಯತ್‍ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಸ್ತಾರೆ ಕ್ಷೇತ್ರದ ಹಿರಿಗಯ್ಯ ಆಯ್ಕೆಯಾದರು. 

ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸ್ಥಾಯಿಸಮಿತಿ ಸಭೆಯಲ್ಲಿ ಜಿಪಂ ಸದಸ್ಯ ಬೀಕನಹಳ್ಳಿ ಸೋಮಶೇಖರ್ ಅವರು ಹಿರಿಗಯ್ಯ ರವರ ಹೆಸರನ್ನು ಸೂಚಿಸಿದಾಗ ಸದಸ್ಯ ಶರತ್‍ ಕೃಷ್ನ ಮೂರ್ತಿ ಅನುಮೋದಿಸಿದರು. ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ಇದಕ್ಕೆ ಇಡೀ ಸಭೆ ಸಹಮತ ವ್ಯಕ್ತಪಡಿಸಿತು.

ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಹಿರಿಗಯ್ಯ ಮಾತನಾಡಿ, ಮೊರಾರ್ಜಿಶಾಲೆ ಮತ್ತು ವಸತಿ ನಿಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಹಾರವನ್ನು ನೀಡಬೇಕು. ಸರಕಾರ ಬಡಮಕ್ಕಳಿಗೆ ಅನುಕೂಲವಾಗಲೆಂದು ರಾಜ್ಯದಾದ್ಯಂತ ವಸತಿ ಶಾಲೆಗಳನ್ನು ಪ್ರಾರಂಬಿಸಿದೆ. ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ, ಊಟ, ವಸತಿ ವ್ಯವಸ್ಥೆ ಮಾಡಿದ್ದರು ಸಹ ಉತ್ತಮ ಫಲಿತಾಂಶ ಬರುತ್ತಿಲ್ಲ. ಅಧಿಕಾರಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ರಾಜ್ಯದಲ್ಲಿಯೇ ಮಾದರಿಯಾಗಿ ಉತ್ತಮ ಫಲಿತಾಂಶ ಬರುವಂತೆ ಕೆಲಸ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್‍ಕುಮಾರ್, ಸದಸ್ಯರಾದ ದಿವ್ಯದಿನೇಶ್, ಅಮಿತಾ ಮುತ್ತಪ್ಪ, ಲೋಲಾಕ್ಷಿಭಾಯಿ, ಬೆಳವಾಡಿರವೀಂದ್ರ, ಮಾಜಿ ಸದಸ್ಯ ನಿರಂಜನ್, ಎ.ಪಿ.ಎಂ.ಸಿ ಅಧ್ಯಕ್ಷ ಬಸವರಾಜ್, ಮಾಜಿ ಅಧ್ಯಕ್ಷ ಕವೀಶ್, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News