ಮುಂಡಗೋಡ: ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ನೇಮಕ

Update: 2018-07-12 13:10 GMT

ಮುಂಡಗೋಡ,ಜು.12: ಮುಂಡಗೋಡ ರೋಟರಿ ಕ್ಲಬ್ ಹೇರಿಟೇಜ್ ನ 2018-19 ಸಾಲಿನ ಅಧ್ಯಕ್ಷರಾಗಿ ಪ್ರಕಾಶ ಹುದ್ಲಮನಿ, ಕಾರ್ಯದರ್ಶಿಯಾಗಿ ಸೊಮಪ್ಪ ಡಿ ಮುಡೆಣ್ಣವರ, ಖಜಾಂಚಿಯಾಗಿ ಚೇತನ ಕಲಾಲ ಆಯ್ಕೆಯಾಗಿದ್ದಾರೆ

ಪದಗ್ರಹಣ ಕಾರ್ಯಕ್ರಮವನ್ನು ಪಟ್ಟಣದ ಟ್ರೀನಿಟಿ ಹಾಲ್‍ನಲ್ಲಿ ದಿ.15-7-2018 ರಂದು ಹಮ್ಮಿಕೊಳ್ಳಲಾಗಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಪದಗ್ರಹಣಾಧಿಕಾರಿಗಳಾಗಿ ಹುಬ್ಬಳ್ಳಿ ಲೆಕ್ಕ ಪರಿಪಶೋಧಕ ಎಸ್.ಬಿ.ಶೆಟ್ಟಿ, ಮುಖ್ಯ ಅತಿಥಿಗಳಾಗಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಮಹಾದೇವಪ್ಪ ದಳಪತಿ ಆಗಮಿಸುವರು ಎಂದು ರೋ.ಎಸ್.ಡಿ.ಮುಡೆಣ್ಣವರ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News