ಮೈಸೂರು: ಐವರು ದರೋಡೆಕೋರರಿಗೆ ಐದು ವರ್ಷ ಕಠಿಣ ಶಿಕ್ಷೆ
Update: 2018-07-13 21:51 IST
ಮೈಸೂರು,ಜು.13: ಐವರು ದರೋಡೆಕೋರರಿಗೆ ಮೈಸೂರಿನ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ಹಾಗೂ 5ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಮಹೇಶ್, ದಿವಾಕರ್, ರಘು, ಕುಮಾರ್, ಗಣೇಶ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಪರಿಸರವಾದಿಗಳಾದ ಪ್ರಸನ್ನ ಮತ್ತು ಪಿ.ಜಿ.ಭರತ್ ರಾತ್ರಿ ವೇಳೆ ಸಂಚರಿಸುವ ಪ್ರಾಣಿಗಳ ವೀಕ್ಷಣೆಗೆ 2008ರ ಡಿಸೆಂಬರ್ 6ರಂದು ರಾತ್ರಿ ಆರ್ ಟಿ ನಗರ ಬಡಾವಣೆಯ ಜಲಸಂಗ್ರಹಾಗಾರದ ಬಳಿ ಕಾರಿನಿಂದ ಇಳಿದಾಗ ಈ ಐವರು ಆರೋಪಿಗಳು ಅವರನ್ನು ಸುತ್ತುವರಿದು ಅವರ ಬಳಿಯಿದ್ದ 54,000ರೂ. ಮೌಲ್ಯದ ಮೂರು ಮೊಬೈಲ್, 1 ಎಟಿಎಂ ಕಾರ್ಡ್, 1 ಬ್ಲೂಟೂತ್ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ್ದರು.
ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಜಯಪುರ ಠಾಣೆಯ ಇನ್ಸಪೆಕ್ಟರ್ ಸದಾನಂದ ಎ.ತಿಪ್ಪಣ್ಣವರ ಅವರು ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ.