ಅಂತುರಯ್ಯ ನಿಧನ: ಉಪಮುಖ್ಯಮಂತ್ರಿ ಪರಮೇಶ್ವರ್ ಸಂತಾಪ

Update: 2018-07-13 16:59 GMT

ತುಮಕೂರು,ಜು.13: ಶುಕ್ರವಾರ ನಿಧನ ಹೊಂದಿದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಅಂತುರಯ್ಯ ಅವರ ಅಂತಿಮ ದರ್ಶನವನ್ನು ಉಪಮುಖ್ಯಮಂಂತ್ರಿ ಡಾ.ಜಿ. ಪರಮೇಶ್ವರ ಅವರು ಪಡೆದು, ಸಂತಾಪ ಸೂಚಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅವರ ನಿಧನ ನನಗೆ ನೋವು ತರಿಸಿದೆ. ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದ ಅವರು, ನನ್ನ ಸಂಬಂಧಿ ಕೂಡ ಆಗಿದ್ದರು. ಚಿಕ್ಕವಯಸ್ಸಿನಿಂದ ನನ್ನನ್ನು ಬೆಳೆಸಿದವರು. ಅವರ ನಿಧನ ವೈಯಕ್ತಿಕ ಆಘಾತ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕರಣಿಸಲಿ ಎಂದರು.

ಆರ್ಥಿಕ ಹೊರೆಗಿಂತ ರೈತರ ಹಿತ ಮುಖ್ಯ:  ರೈತರ ಸಾಲಮನ್ನಾ ಮಾಡುವುದರಿಂದ ಆ ರಾಜ್ಯದ ಆರ್ಥಿಕ ಸ್ಥಿತಿ ಕುಸಿಯುತ್ತದೆ ಎಂಬ ಆರ್‌ಐ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕೃಷಿ ಕ್ಷೇತ್ರ ಬಹಳ ಪ್ರಾಮುಖ್ಯವಾದದ್ದು. ಆರ್ಥಿಕ ವ್ಯವಸ್ಥೆ ಕೃಷಿಯಿಂದಲೇ ಬೆಳೆಯುತ್ತಿದೆ, ಆ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವುದು ಎಲ್ಲ ಸರಕಾರಗಳ ಆದ್ಯ ಕರ್ತವ್ಯ. ದೇಶದಲ್ಲಿ ಸುಮಾರು 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ರೈತರ ಕಷ್ಟಕ್ಕೆ ಸರಕಾರ ನೆರವಿಗೆ ಬರಬೇಕು. ಇದರಿಂದ ಆರ್ಥಿಕ ವ್ಯವಸ್ಥೆ ಏರುಪೇರಾಗಬಹುದು. ಆದರೆ ರೈತನ ಹಿತದೃಷ್ಟಿಯೇ ಮುಖ್ಯವಾಗುತ್ತದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ರೈತರ ನೆರವಿಗೆ ಹೋಗುವುದು ಸರಕಾರದ ಕರ್ತವ್ಯ. ಜತೆಗೆ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಕಾನೂನು ರಚಿಸಿದ್ದೇವೆ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News