ಪುತ್ರ ಕಿರುಕುಳ ನೀಡಿದರೆ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಹೆತ್ತವರು ವಾಪಸ್ ಪಡೆಯಬಹುದು: ಹೈಕೋರ್ಟ್

Update: 2018-07-16 08:24 GMT

ಮುಂಬೈ, ಜು.16: ಪುತ್ರನೊಬ್ಬ ತನ್ನ ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದರೆ ಅಥವಾ ಅವರಿಗೆ ಕಿರುಕುಳ ನೀಡಿದರೆ  ಹೆತ್ತವರು ಆತನಿಗೆ ಉಡುಗೊರೆಯಾಗಿ ತಾವು ನೀಡಿದ್ದ ಆಸ್ತಿಯನ್ನು ವಾಪಸ್ ಪಡೆಯಬಹುದಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ವಿಶೇಷ ಕಾನೂನನ್ನು ಉಲ್ಲೇಖಿಸಿದ ಜಸ್ಟಿಸ್ ರಂಜಿತ್ ಮೋರೆ ಹಾಗೂ ಅನುಜಾ ಪ್ರಭುದೇಸಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಂಧೇರಿಯ ಹಿರಿಯ ನಾಗರಿಕರೊಬ್ಬರು ಗಿಫ್ಟ್ ಡೀಡ್ ಮೂಲಕ ತಮ್ಮ ಪುತ್ರನಿಗೆ ತಮ್ಮ ಫ್ಲ್ಯಾಟಿನಲ್ಲಿ ಶೇ.50ರಷ್ಟು ನೀಡಿದ್ದ ಪಾಲನ್ನು ರದ್ದುಗೊಳಿಸಿ ಟ್ರಿಬ್ಯೂನಲ್ ಒಂದು ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ

"ಗಿಫ್ಟ್ ಡೀಡ್ ಅನ್ನು ಪುತ್ರ ಮತ್ತಾತನ ಪತ್ನಿಯ ಮನವಿ ಮೇರೆಗೆ ಮಾಡಲಾಗಿತ್ತು. ಇದರರ್ಥ ಅವರಿಬ್ಬರು ತಂದೆ ಮತ್ತವರ ಎರಡನೇ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಿದ್ದರಿದ್ದಾರೆಂದು ಅರ್ಥ. ಆದರೆ ತಂದೆಯನ್ನು ನೋಡಿಕೊಳ್ಳಲು ಸಿದ್ಧರಿದ್ದ ಅವರು ತಂದೆಯ ಎರಡನೇ ಪತ್ನಿಯ ಬಗೆ ಅದೇ  ಧೋರಣೆ ಅನುಸರಿಸದೇ ಇದ್ದುದರಿಂದ ಗಿಫ್ಟ್ ಡೀಡ್  ರದ್ದು ಪಡಿಸುದ ಆದೇಶದಲ್ಲಿ ತಪ್ಪೇನೂ ಇಲ್ಲ" ಎಂದು  ಹೇಳಿದ ನ್ಯಾಯಾಲಯ ಹಿರಿಯ ನಾಗರಿಕರ ಪುತ್ರನ ಅಪೀಲನ್ನು ರದ್ದು ಮಾಡಿದೆ.

ಈ ಪ್ರಕರಣದಲ್ಲಿ ಹಿರಿಯ ನಾಗರಿಕರ ಮೊದಲ ಪತ್ನಿ 2014ರಲ್ಲಿ ಮೃತಪಟ್ಟ ನಂತರ ಅವರು ಕಳೆದ ವರ್ಷ ಎರಡನೇ ವಿವಾಹವಾಗಲು ನಿರ್ಧರಿಸಿದಾಗ ಪುತ್ರ ಮತ್ತು ಸೊಸೆ ಅಂಧೇರಿಯಲ್ಲಿನ ಅವರ ಫ್ಲ್ಯಾಟಿನ  ಶೇ.50ರಷ್ಟು ಪಾಲನ್ನು ತಮಗೆ ನೀಡಬೇಕೆಂದು ಹೇಳಿದಾಗ ಅವರು ಅಂತೆಯೇ ಮಾಡಿದ್ದರು. ಆದರೆ ನಂತರ ಮಗ ಸೊಸೆ ಇಬ್ಬರೂ ಹಿರಿಯ ನಾಗರಿಕರ ಎರಡನೇ ಪತ್ನಿಯನ್ನು ಅವಮಾನಿಸಲಾರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News