ಹನೂರು: ರೋಟರಿ ಸಂಸ್ಥೆ ವತಿಯಿಂದ ಪದವಿ ಪ್ರಧಾನ ಸಮಾರಂಭ

Update: 2018-07-16 16:37 GMT

ಹನೂರು,ಜು.16: ರೋಟರಿಯ ಪ್ರತಿಯೊಬ್ಬ ಸದಸ್ಯರೂ ಕೂಡ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಸೇವಾ ಕಾರ್ಯ ಮಾಡುವ ಮೂಲಕ ಇತರರಿಗೆ ಸ್ಪೂರ್ತಿ ಆಗುವಂತಿರಬೇಕು ಎಂದು ಮಾಜಿ ಜಿಲ್ಲಾ ಗರ್ವನರ್ ರೊ.ಎಂ.ಎಂ ಸುರೇಶ್‍ ಚಂಗಪ್ಪ ಹೇಳಿದರು 

ಪಟ್ಟಣ ವಾಸವಿ ಮಹಲ್‍ನಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ನೂತನ ಅಧ್ಯಕ್ಷ ಸಿ.ಗಿರೀಶ್ ಹಾಗೂ ಕಾರ್ಯದರ್ಶಿ ಪ್ರದೀಪ್ ಪದವಿ ಪ್ರಧಾನ ಸಮಾರಂಭದಲ್ಲಿ ನಂತರ ಮಾತನಾಡಿದ ಅವರು, 'ರೋಟರಿಯ ಕಂಪು ಅವಶ್ಯಕತೆ ಇದ್ದಲ್ಲೆಲ್ಲಾ ವ್ಯಾಪಿಸುವುದರ ಜೊತೆಗೆ, ತಂಡವನ್ನು ಒಳ್ಳೆಯ ಕೆಲಸಕ್ಕೆ ಪ್ರೇರೇಪಿಸುವವನು ಉತ್ತಮ ನಾಯಕ ಎನಿಸುಕೊಳ್ಳುತ್ತಾನೆ. ಆದ್ದರಿಂದ ನೂತನ ಅಧ್ಯಕ್ಷರಾದವರು ಸಕರಾತ್ಮಕ ಚಿಂತನೆಗಳೊಂದಿಗೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೂಂಡು ಒಳ್ಳೆಯ ಯೋಜನೆಗಳನ್ನು ರೂಪಿಸುವುದರ ಮೂಲಕ ನಿಮ್ಮ ಪಟ್ಟಣಕ್ಕೆ ಪ್ರಥಮ ಆದ್ಯತೆ ಕೊಟ್ಟು, ನಿಮ್ಮ ಪಟ್ಟಣಕ್ಕೆ ಬೇಕಾಂದತಹ ರಸ್ತೆ, ನೀರಿನ ವ್ಯವಸ್ಥೆ, ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿ. ಒಗ್ಗಟ್ಟಾಗಿ ಮಾಡಿದರೆ ಹನೂರು ಪಟ್ಟಣ ಮಾದರಿ ನಗರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಊರು ಚೆನ್ನಾಗಿದ್ದರೆ ನಿಮ್ಮ ಆರೋಗ್ಯವು ಸಹ ಚೆನ್ನಾಗಿರುತ್ತದೆ. ನಿಮ್ಮ ಪರಿಸರದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಜಾತಿ, ದರ್ಮ ಮರೆತು, ಒಟ್ಟಾಗಿ ಊರಿಗೊಷ್ಕರ ಶ್ರಮ ಪಟ್ಟರೆ ಅದು ಅನ್ಯರಿಗೆ ಮಾದರಿಯಾಗುತ್ತದೆ. ನಂತರ ಅವರೂ ಕೂಡ ಅವರ ಊರನ್ನು ಅಭಿವೃದ್ದಿ ಪಡಿಸಿದರೆ ಈಡೀ ವಿಶ್ವವೇ ಸುಂದರವಾದ ಉದ್ಯಾನವನ ಆಗುತ್ತದೆ ಎಂದು ಹೇಳಿದರು .

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಾದ ಅಧ್ಯಕ್ಷ ಸಿ.ಗಿರೀಶ್, ಪ್ರದೀಪ್.ವಿ ಕಾರ್ಯದರ್ಶಿ, ನಾಗೇಂದ್ರ ಖಜಾಂಜಿ, ರವಿಂದ್ರ ಸಾರ್ಜೆಂಟ್, ಬಾಲರಾಜ್‍ ನಾಯ್ಡು, ದಯಾನಂದ, ಪಾಂಡುರಂಗನಾಯ್ಡು, ರಮೇಶ್, ಸುರೇಶ್‍ ನಾಯ್ಡು, ರಾಜೇಂದ್ರನ್, ಡಾ.ಪ್ರಕಾಶ್, ಜೀವೇಂದ್ರ ಕುಮಾರ್, ಮ್ಯಾಕ್ಸಿಂ ಗೋವಿಯಸ್ ನಿದೇರ್ಶಕರುಗಳಿಗೆ ಶುಭ ಹಾರೈಸಿದರು.

ಸಮಾರಂಭದ ಪ್ರಾರಂಭದಲ್ಲಿ ನಿಕಟ ಪೂರ್ವ ರೋಟರಿ ಅಧ್ಯಕ್ಷ ಉದ್ದನೂರು ಪ್ರಸಾದ್ ತಮ್ಮ ನಿರ್ಗಮಿತ ಭಾಷಣವನ್ನು ಮಾತನಾಡಿದರು.

ಇದೇ ಸಂಧರ್ಭದಲ್ಲಿ ಸಂಸ್ಥೆಗೆ ನೂತನವಾಗಿ ಪಟ್ಟಣದ ರಾಜೂಗೌಡ, ರಂಗಸ್ವಾಮಿ, ಬಾಬು ಸೇರ್ಪಡೆಗೂಂಡರು. ಈ ಸಮಾರಂಭದಲ್ಲಿ ಶಿಕ್ಷಕಿ ಜಯಮ್ಮ ಮತ್ತು 2017-18 ಸಾಲಿನಲ್ಲಿ ಪದವಿ ಪೂರ್ವ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಕ್ರೀಡಾಕೂಟದಲ್ಲಿ ವಲಯದಿಂದ ಆಯ್ಕೆಯಾಗಿ ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಗೌರ್ನರ್ ಬಿ.ಎನ್ ಸುರೇಶ್, ವಲಯ ಲೆಪ್ಟಿನೆಂಟ್ ಮಹೇಶ್.ಎಸ್, ಕೊಳ್ಳೇಗಾಲ ಮತ್ತು ನಂಜನಗೂಡು ರೋಟರಿ ಸಂಸ್ಥೆಯ ನಿಕಟ ಪೂರ್ವ ರೋಟರಿ ಅಧ್ಯಕ್ಷ ಉದ್ದನೂರು ಪ್ರಸಾದ್ ಹಾಗೂ ಪದಾಧಿಕಾರಿಗಳು, ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಗುಪ್ತ, ವೆಂಕಟರಮಣನಾಯ್ಡು, ನಾಗರಾಜು, ಕೃಷ್ಣ, ವೆಂಟಕಟೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News