×
Ad

ಬಡವರ ಕೆಲಸಗಳನ್ನು ಮಾಡದ ಪಿಡಿಓಗಳಿಗೆ ಬೈದಿದ್ದೇನೆ: ಸಚಿವ ಜಿ.ಟಿ.ದೇವೇಗೌಡ ಸಮರ್ಥನೆ

Update: 2018-07-16 22:24 IST

ಮೈಸೂರು,ಜು.17: ಬಡವರ ಕೆಲಸ ಕಾರ್ಯಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಗಳು ಸರಿಯಾಗಿ ನಿರ್ವಹಿಸದ ಕಾರಣ ಪಿಡಿಓಗಳಿಗೆ ಬೈದಿದ್ದೇನೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನ ಇಲವಾಲ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ಆಗಮಿಸಿದ ಅವರು, ಮತದಾರರ ಕೃತಜ್ಞತಾ ಸಮಾವೇಶದಲ್ಲಿ  ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಪಿಡಿಓ ಗಳಿಗೆ ಬೈದಿರೋದನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸಮಾವೇಶದಲ್ಲಿ ಪಿಡಿಓಗಳಿಗೆ ಬೈದಿದ್ದು ನಿಜ. ಬಡವರ ಕೆಲಸ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ಈಗಲಾದರೂ ಕೆಲಸ ಮಾಡಲಿ ಎಂದು ಹೇಳಿದ್ದೆ ಎಂದರು.

ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರು ಹಾಗೂ ವ್ಯವಸ್ಥಾಪನಾ ಮಂಡಲಿ ಸದಸ್ಯರ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಸರ್ಕಾರ ಅವಧಿಯ ಸಿಂಡಿಕೇಟ್ ಸದಸ್ಯರನ್ನು ಮುಂದುವರೆಸಿ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯನವರ ಪತ್ರ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಬಂದಾಗ ನಾಮನಿರ್ದೇಶನ ಸದಸ್ಯರು ಬದಲಾಗುತ್ತಾರೆ. ಹೀಗಾಗಿ ಎಲ್ಲ ಸದಸ್ಯರನ್ನು ಬದಲಾಯಿಸುತ್ತೇವೆ. ಇದು ಸಮಿಶ್ರ ಸರ್ಕಾರ. ಹೀಗಾಗಿ  ಇರುವ ಸದಸ್ಯರನ್ನು ಮುಂದುವರೆಸಲು ಸಾಧ್ಯವಿಲ್ಲ. ಎರಡೂ ಪಕ್ಷಗಳ ಮುಖಂಡರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಅಪ್ಪ ಮಕ್ಕಳಿಗೆ ಅಳೋದು ಚಾಳಿ ಎಂದ ಈಶ್ವರಪ್ಪನವರ ಮಾತಿನ ಕುರಿತು ಕುಮಾರಸ್ವಾಮಿಯವರು ಅಳುವುದನ್ನು ಸಮರ್ಥಿಸಿಕೊಂಡರು. ನಾವು ಸಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ಕುಮಾರಸ್ವಾಮಿ ಭಾವನಾತ್ಮಕವಾಗಿ ಕಣ್ಣೀರಾಕಿದ್ದಾರೆ. ಚಾಮುಂಡೇಶ್ಚರಿ ಕ್ಷೇತ್ರ ಬಿಡೋವಾಗ ಸಿದ್ದರಾಮಯ್ಯ ಯಾಕೆ ಕಣ್ಣೀರು ಹಾಕಿದ್ದರು. ಸಮಿಶ್ರ ಸರ್ಕಾರದಲ್ಲಿ ಕೊಟ್ಟ ಭರವಸೆ ಈಡೇರಿಸಲು ಆಗಲಿಲ್ಲ ಎನ್ನುವ ನೋವಿದೆ. ಹೀಗಾಗಿ  ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದರಷ್ಟೇ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News