ಎಸ್ಪಿ ಭೀಮಾಶಂಕರ ಗುಳೇದ್ ಎತ್ತಂಗಡಿ: ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
Update: 2018-07-16 22:27 IST
ಬೆಂಗಳೂರು, ಜು.16: ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಲೋಕಾಯುಕ್ತ ಎಸ್ಪಿ ಆಗಿದ್ದ ಡಾ. ಸುಮನ್ ಡಿ.ಪೆನ್ನೆಕರ್ ಅವರನ್ನು ಕೊಡಗು ಎಸ್ಪಿಯನ್ನಾಗಿ ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಟಿ.ಪಿ.ಶಿವಕುಮಾರ್ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿದೆ.
ಕೊಡಗು ಜಿಲ್ಲಾ ಎಸ್ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಅವರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಆಧೀನ ಕಾರ್ಯದರ್ಶಿ ರಾಬೀನ್ ವನರಾಜ್ ಜೆ. ಆದೇಶ ಹೊರಡಿಸಿದ್ದಾರೆ.