×
Ad

ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ಕೊಂಚ ವಿರಾಮ

Update: 2018-07-16 23:37 IST

ಚಿಕ್ಕಮಗಳೂರು, ಜು.16: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ರವಿವಾರದಿಂದ ಕೊಂಚ ವಿರಾಮ ನೀಡಿದ್ದು, ಸದ್ಯ ಜಿಲ್ಲೆಯ ಅಲ್ಲಲ್ಲಿ ಬೆಳಗ್ಗೆ ಹಾಗೂ ರಾತ್ರಿ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ ಜಿಲ್ಲೆಯ ಹಲವೆಡೆ ಮಳೆ ಅವಾಂತರಗಳು ಮುಂದುವರಿದಿವೆ.

ಜಿಲ್ಲೆಯ ಮಲೆನಾಡಿನ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿಂದ ಮಹಾಮಳೆಯ ಆರ್ಭಟಕ್ಕೆ ಜನತೆ ರೋಸಿಹೋಗಿ, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ರವಿವಾರ ಮಲೆನಾಡಿನಲ್ಲಿ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದ್ದು, ಮಳೆಯ ಆರ್ಭಟ ಕೊಂಚ ಕಡಿಮೆಯಾಗಿತ್ತು. ಆದರೆ ರಾತ್ರಿ ವೇಳೆ ಮತ್ತೆ ಮಳೆ ಸುರಿದಿದ್ದು, ಸೋಮವಾರ ಬೆಳಗ್ಗೆ ಮಲೆನಾಡಿನ ಕೆಲವೆಡೆ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ. ಮಧ್ಯಾಹ್ನದ ನಂತರ ಬಿಸಿಲು, ಗಾಳಿ ಸಹಿತ ತುಂತುರು ಮಳೆಯ ವಾತಾವರಣ ಮಲೆಾಡಿನಲ್ಲಿತ್ತು.

ರವಿವಾರ ಎನ್.ಆರ್.ಪುರ ತಾಲೂಕಿನ ಪೇಟೆಕೆರೆ ಎಂಬಲ್ಲಿ ಗಾಳಿ ಮಳೆಗೆ ಮನೆಯೊಂದು ಕುಸಿದುಬಿದ್ದಿದ್ದು, ಮನೆಯಲ್ಲಿದ್ದ ಇಬ್ಬರು ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಆನೆಗುಂಡಿ ಎಂಬಲ್ಲಿ ಭಾರೀ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೂವೆ-ಆನೆಗುಂಡಿ ಸಂಪರ್ಕ ಕಡಿತಗೊಂಡಿದ್ದ ಬಗ್ಗೆ ವರದಿಯಾಗಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ವಿವರ ಇಂತಿದೆ: ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 4.2 ಮಿ.ಮೀ., ವಸ್ತಾರೆ 25.2 ಮಿ.ಮೀ., ಜೋಳದಾಳು 25.2 ಮಿ.ಮೀ., ಆಲ್ದೂರು 26 ಮಿ.ಮೀ., ಕೆ.ಆರ್.ಪೇಟೆ 9.2 ಮಿ.ಮೀ., ಅತ್ತಿಗುಂಡಿ 34.3 ಮಿ.ಮೀ., ಸಂಗಮೇಶ್ವರಪೇಟೆ 7.6 ಮಿ.ಮೀ., ಬ್ಯಾರವಳ್ಳಿ 30.2 ಮಿ.ಮೀ., ಕಳಸಾಪುರ 2.4 ಮಿ.ಮೀ., ಮಳಲೂರು 9.2 ಮಿ.ಮೀ., ದಾಸರಹಳ್ಳಿಯಲ್ಲಿ 3.2 ಮಿ.ಮೀ. ಮಳೆಯಾಗಿದೆ.

ಕಡೂರು ತಾಲೂಕಿನ ಕಡೂರು 1 ಮಿ.ಮೀ., ಯಗಟಿ 1.4 ಮಿ.ಮೀ., ಸಖರಾಯಪಟ್ಟಣ 4.2 ಮಿ.ಮೀ., ಗಿರಿಯಾಪುರ 4.4 ಮಿ.ಮೀ., ಬೀರೂರು 2.8 ಮಿ.ಮೀ., ಎಮ್ಮೆದೊಡ್ಡಿಯಲ್ಲಿ 15.2 ಮಿ.ಮೀ., ಕೊಪ್ಪ ತಾಲೂಕಿನ ಕೊಪ್ಪ 92.2 ಮಿ.ಮೀ., ಹರಿಹರಪುರ 80.8 ಮಿ.ಮೀ., ಜಯಪುರ 21 ಮಿ.ಮೀ., ಕಮ್ಮರಡಿ 85.5 ಮಿ.ಮೀ., ಬಸರಿಕಟ್ಟೆ 73.8 ಮಿ.ಮೀ., ಮೂಡಿಗೆರೆ ತಾಲೂಕಿನ ಮೂಡಿಗೆರೆ 19.8 ಮಿ.ಮೀ., ಕೊಟ್ಟಿಗೆಹಾರ 42 ಮಿ.ಮೀ., ಜಾವಳಿ 31 ಮಿ.ಮೀ., ಗೋಣಿಬೀಡು 56 ಮಿ.ಮೀ., ಕಳಸ 52 ಮಿ.ಮೀ. ಮಳೆಯಾಗಿದೆ.

ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ 27 ಮಿ.ಮೀ., ಬಾಳೆಹೊನ್ನೂರು 14.6 ಮಿ.ಮೀ., ಮೇಗರಮಕ್ಕಿ 70 ಮಿ.ಮೀ., ಶೃಂಗೇರಿ ತಾಲೂಕಿನ ಶೃಂಗೇರಿ 40 ಮಿ.ಮೀ., ಕಿಗ್ಗ 33.4 ಮಿ.ಮೀ., ಕೆರೆಕಟ್ಟೆ 86.4 ಮಿ.ಮೀ., ತರೀಕೆರೆ ತಾಲೂಕಿನ ತರೀಕೆರೆ 15.6 ಮಿ.ಮೀ., ಲಕ್ಕವಳ್ಳಿ 14.2 ಮಿ.ಮೀ., ಅಜ್ಜಂಪುರ 12 ಮಿ.ಮೀ., ಶಿವನಿ 2 ಮಿ.ಮೀ., ಬುಕ್ಕಾಂಬುದಿ 8.3 ಮಿ.ಮೀ., ಲಿಂಗದಹಳ್ಳಿ 9.2 ಮಿ.ಮೀ., ತಣಿಗೆಬೈಲು 21 ಮಿ.ಮೀ., ಉಡೇವಾ 15 ಮಿ.ಮೀ., ತ್ಯಾಗದಬಾಗಿ 14.2 ಮಿ.ಮೀ., ಹುಣಸಘಟ್ಟ 21 ಮತ್ತು ರಂಗೇನಹಳ್ಳಿಯಲ್ಲಿ 16.6 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News