ರಸ್ತೆಗೆ ಹಾಲು ಸುರಿದು ಆಕ್ರೋಶ...
Update: 2018-07-16 23:46 IST
ಹೈನುಗಾರರಿಂದ ಖರೀದಿಸುವ ಪ್ರತಿ ಲೀ.ಹಾಲಿಗೆ ಐದು ರೂ.ಹೆಚ್ಚಿನ ಬೆಲೆಯನ್ನು ನೀಡುವಂತೆ ಬೇಡಿಕೆಯೊಂದಿಗೆ ಸ್ವಾಭಿಮಾನಿ ಶೇತ್ಕರಿ ಸಂಘಟನೆಯು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಮುಖ ಡೇರಿಗಳು ಸೋಮವಾರದಿಂದ ರೈತರಿಂದ ಹಾಲು ಖರೀದಿಯನ್ನು ಸ್ಥಗಿತಗೊಳಿಸಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಟ್ಯಾಂಕರ್‌ಗಳನ್ನು ತಡೆದ ರೈತರು ಅವುಗಳಲ್ಲಿದ್ದ ಹಾಲನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದಾರೆ.