ಕೊಡಗು ಜಿಲ್ಲಾ ನೂತನ ಎಸ್‍ಪಿಯಾಗಿ ಡಾ.ಸುಮನ್ ಡಿ.ಪನ್ನೇಕರ್ ನೇಮಕ
Update: 2018-07-17 20:22 IST
ಮಡಿಕೇರಿ, ಜು.17: ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಡಾ.ಸುಮನ್ ಡಿ. ಪನ್ನೇಕರ್ ನೇಮಕಗೊಂಡಿದ್ದಾರೆ.
ಇವರು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಎಸ್ಪಿಯಾಗಿದ್ದ ಪಿ.ರಾಜೇಂದ್ರ ಪ್ರಸಾದ್ ಅವರು ವರ್ಗಾವಣೆಯಾಗಿದ್ದು, ಪರ್ಯಾಯ ಸ್ಥಳವನ್ನು ಸರ್ಕಾರ ಸೂಚಿಸಿಲ್ಲ.