ಪ್ರೇಮಕುಮಾರಿ ತಾಯಿ ಮೇಲೆ ಶಾಸಕ ರಾಮದಾಸ್ ಬೆಂಬಲಿಗರಿಂದ ಹಲ್ಲೆ: ಆರೋಪ

Update: 2018-07-17 15:26 GMT
ಪ್ರೇಮಕುಮಾರಿ

ಮೈಸೂರು,ಜು.17: ಶಾಸಕ ಎಸ್.ಎ.ರಾಮದಾಸ್ ಮಾಜಿ ಪ್ರೇಯಸಿ ಪ್ರೇಮಕುಮಾರಿ ತಾಯಿ ಮೇಲೆ ಶಾಸಕ ಎಸ್.ಎ.ರಾಮದಾಸ್ ಬೆಂಬಲಿಗರು  ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಪ್ರೇಮಕುಮಾರಿ ತಾಯಿ ಲೀಲಾವತಿ ಅವರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದ್ದು, ರಾಮದಾಸ್ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ವಿದ್ಯಾರಣ್ಯಂ ಪುರಂನ ರಾಮದಾಸ್ ಮನೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ರಾಮದಾಸ್ ಬೆಂಬಲಿಗರಾದ ಸುವರ್ಣಮ್ಮ ಸೇರಿದಂತೆ ಇತರೆ ಬೆಂಬಲಿಗರು ರಾಜಿ ಪಂಚಾಯಿತಿ ಮಾಡಲು ಕರೆದು ಥಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. 

ರಾಮದಾಸ್ ಮತ್ತು ಪ್ರೇಮಕುಮಾರಿ ನಡುವೆ ಸುವರ್ಣಮ್ಮ ಎಂಬವರು ಸಂಧಾನ ಮಾಡಿಸಿದ್ದರು. ರಾಮದಾಸ್ ,ಪ್ರೇಮಕುಮಾರಿ ಜೊತೆ ಮಧ್ಯವರ್ತಿ ಸುವರ್ಣಮ್ಮ ಮಾತನಾಡಿರುವ ಸಂಧಾನದ ಆಡಿಯೋ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News