ಕೆಥೋಲಿಕ್ ಧರ್ಮಗುರು ವಿಕ್ಟರ್ ನರೊನಾ ನಿಧನ: ಅಂತಿಮ ದರ್ಶನ ಪಡೆದ ಸಚಿವ ಜಿ.ಟಿ.ದೇವೇಗೌಡ

Update: 2018-07-17 15:30 GMT

ಮೈಸೂರು,ಜು.17: ಕೆಥೋಲಿಕ್ ಧರ್ಮಗುರು ಡೆನಿಸ್ ವಿಕ್ಟರ್ ನರೊನಾ(86) ವಯೋಮಾನದ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ನಿಧನರಾಗಿದ್ದಾರೆ.

ಇವರು ಸಂತ ಜೋಸೆಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅಂತ್ಯಕ್ರಿಯೆಯ ವಿಧಿವಿಧಾನಗಳು ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ನಡೆದು ಗಾಂಧಿನಗರದ ರೋಮನ್ ಕೆಥೋಲಿಕ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ  ಧರ್ಮಗುರುವಿನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. 

ಬಳಿಕ ಮಾತನಾಡಿದ ಅವರು ನನ್ನ ಆತ್ಮೀಯರಾಗಿದ್ದ ಅವರು ನಿಧಾನರಾಗಿದ್ದು ನನ್ನ ಮನಸ್ಸಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಫಾದರ್ ಅವರು ಪ್ರತಿಷ್ಠಿತ ಡಿಸಿಯನ್ ಎಜುಕೇಷನ್ ಸೊಸೈಟಿಯನ್ನು ಉನ್ನತ ಹಂತಕ್ಕೆ ಕೊಂಡ್ಯೊಯ್ದು ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಅಪಾರ ಕೊಡುಗೆ ನೀಡಿದ್ದರು. 86ರ ಇಳಿವಯಸ್ಸಿನಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡುವಂತೆ ನನಗೆ ಸಲಹೆ ನೀಡುತ್ತಿದ್ದರು. ಇವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ಸದಸ್ಯರಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News