ಸಕಲೇಶಪುರ: ಆನೆ ದಾಳಿ; ವ್ಯಕ್ತಿಗೆ ಗಾಯ
Update: 2018-07-18 20:36 IST
ಸಕಲೇಶಪುರ,ಜು.18: ಗದ್ದೆಯಲ್ಲಿ ಕೆಲಸ ಮಾಡುವಾಗ ಏಕಾಏಕಿ ಆನೆಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಘಟನೆ ತಾಲೂಕಿನ ಹಾನುಬಾಳು ಹೋಬಳಿ ಅಗನಿ ಗ್ರಾಮದಲ್ಲಿ ನಡೆದಿದೆ.
ಎ.ಎಸ್ ಶಿವರಾಜ್ (60) ಆನೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ಸಂಜೆ 4ರ ವೇಳೆ ತಮ್ಮ ಗದ್ದೆಯಲ್ಲಿ ಕೆಲಸಮಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ಜನರ ಕಿರುಚಾಟದಿಂದ ಆನೆ ಅಲ್ಲಿಂದ ಪರಾರಿಯಾಗಿದೆ.
ನಂತರ ಗ್ರಾಮಸ್ಥರು ಪಟ್ಟಣದ ಕ್ರಫರ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕೀತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ.