ಟೋಲ್ ಕೇಳಿದ್ದಕ್ಕೆ ಬ್ಯಾರಿಕೇಡ್ ಮುರಿದ ಶಾಸಕ

Update: 2018-07-19 05:20 GMT

ತ್ರಿಶ್ಶೂರ್, ಜು.19: ಪಳಿಯಕ್ಕರ ಟೋಲ್‌ ಪ್ಲಾಝದಲ್ಲಿ ಸಿಬ್ಬಂದಿ ಟೋಕ್ ಕೇಳಿದ್ದಕ್ಕೆ ಕೋಪಗೊಂಡ ಪೂಂಜರ್ ಕ್ಷೇತ್ರದ ಶಾಸಕ ಪಿ.ಸಿ.ಜಾರ್ಜ್ ಅವರು ಟೋಲ್‌ಪ್ಲಾಝ ಬಳಿಯ ಬ್ಯಾರಿಕೇಡ್ ಮುರಿದು ಹಾಕಿ ಹೋದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಶಾಸಕ ಜಾರ್ಜ್ ಅವರ ವಾಹನವನ್ನು ಟೋಲ್ ಸಿಬ್ಬಂದಿ ತಡೆದಾಗ ಕೋಪಗೊಂಡ ಶಾಸಕರು ವಾಹನದಿಂದ ಇಳಿದು ತಮ್ಮ ಸಹಚರರ ನೆರವಿನಿಂದ ಬ್ಯಾರಿಕೇಡ್ ಮುರಿದು ಹಾಕಿ ವಾಹನದಲ್ಲಿ ಪ್ರಯಾಣ ಮುಂದುವರಿಸಿದರು ಎಂದು ಟೋಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಟೋಲ್‌ಪ್ಲಾಝಾದ ಸಿಸಿಟಿವಿಯಲ್ಲೂ ದಾಖಲಾಗಿದೆ.

"ನಾನು ಶಾಸಕ ಎಂದು ಹೇಳಿದ ಬಳಿಕವೂ ಟೋಲ್ ನೀಡುವಂತೆ ಸಿಬ್ಬಂದಿ ಒತ್ತಾಯಿಸಿದರು. ವಾಹನದ ಹಿಂಬದಿ ಮತ್ತು ಮುಂದಿನ ಭಾಗದಲ್ಲಿ ಶಾಸಕರ ವಾಹನ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಶಾಸಕರು ಟೋಲ್ ನೀಡಬೇಕಿಲ್ಲ ಎಂದು ನಿಯಮಾವಳಿ ಸ್ಪಷ್ಟವಾಗಿ ಹೇಳುತ್ತದೆ" ಎಂದು ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ.

ಸಿಬ್ಬಂದಿ ವಾಹನ ಬಿಡುತ್ತಾರೆ ಎಂಬ ವಿಶ್ವಾಸದಿಂದ ಕೆಲ ನಿಮಿಷ ವರೆಗೆ ಕಾರಿನಲ್ಲಿ ಕಾಯುತ್ತಿದ್ದೆ. ಆಗ ಕೆಳಗಿಳಿದು ಗೇಟು ತೆರೆಯುವಂತೆ ಮನವಿ ಮಾಡಿದೆ. ಆದರೆ ಅದಕ್ಕೂ ಸಿಬ್ಬಂದಿ ಒಪ್ಪಲಿಲ್ಲ ಎಂದು ಶಾಸಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News