ಸುಂಟಿಕೊಪ್ಪ: ಭಾರೀ ಮಳೆಗೆ ಮನೆ ಗೋಡೆ ಕುಸಿತ

Update: 2018-07-19 11:29 GMT

ಸುಂಟಿಕೊಪ್ಪ,ಜು.19: ಕೆದಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲೇರಿ ಗ್ರಾಮದ ಅಯ್ಯಪ್ಪ ಎಂಬವರ ಮನೆಯ ಗೋಡೆ ಕುಸಿದು ಸಾವಿರಾರು ರೂ ನಷ್ಟ ಉಂಟಾಗಿದೆ. 

ಭಾರೀ ಮಳೆ ಗಾಳಿಯಿಂದಾಗಿ ಹಾಲೇರಿ ಗ್ರಾಮದ ಮೂಲೆಮನೆ ಅಯ್ಯಪ್ಪ ಎಂಬವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕೆದಕಲ್ ಗ್ರಾ.ಪಂ.ಅಧ್ಯಕ್ಷರಾದ ಬಾಲಕೃಷ್ಣ ರೈ, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗಾರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News