ಹನೂರು: ಹೋಗೆನಕಲ್ ಜಲಪಾತದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹ

Update: 2018-07-19 15:38 GMT

ಹನೂರು,ಜು.19: ಕಾವೇರಿ ನದಿಯ ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಹಂಚಿನಲ್ಲಿರುವ ಹೋಗೆನಕಲ್ ಜಲಪಾತದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಹೋಗಕಲ್ ಜಲಪಾತವು ಕರ್ನಾಟಕ–ತಮಿಳುನಾಡು ರಾಜ್ಯಗಳ ಗಡಿಯಲ್ಲಿದ್ದು, ಶಿವನ ಸಮುದ್ರದಲ್ಲಿ ಅಧ್ಬುತವಾದ ಜಲಧಾರೆಯನ್ನು ಸೃಷ್ಟಿಸಿ ಸಾಗುವ  ಕಾವೇರಿ ನದಿ ಮೆಟ್ಟೂರು ಜಲಾಶಯ ಸೇರುತ್ತದೆ. ಮೇಲಿಂದ ಆಳಕ್ಕೆ ಧುಮುಕುವ ನೀರು ಹೋಗನಕಲ್‍ನ ಸೌಂದರ್ಯಕ್ಕೆ ಮುನ್ನುಡಿ ಬರೆದು ಎರಡು ರಾಜ್ಯದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಆದರೆ ಹಲವು ದಿನಗಳಿಂದ ರಾಜ್ಯದ ಕಾವೇರಿ ನದಿಯ ತಪ್ಪಲಿನಲ್ಲಿರುವ ಸ್ಥಳಗಳಲ್ಲಿ ಭಾರೀ ಪ್ರಮಾಣದ ಮಳೆಯಾದ ಕಾರಣ ಎಲ್ಲಾ ಜಲಾಶಯಗಳು ತುಂಬಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹೋಗನಕಲ್ ಸಂಪೂರ್ಣವಾಗಿ ಭರ್ತಿಯಾಗಿ ಅಪಾಯದಂಚಿನಲ್ಲಿ ಹರಿಯುತ್ತಿದೆ.

ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ: ರಾಜ್ಯದ ಕೊಡಗು, ಮಡಿಕೇರಿ ಸೇರಿದಂತೆ ಕೇರಳ ರಾಜ್ಯದ ಗಡಿ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ಕೆಆರ್‍ಎಸ್, ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಒಟ್ಟಾರೆ ನೀರು ಹರಿದು ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಸೇರುತ್ತಿದ್ದು, ಇಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಏರಿಕೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Writer - ವರಧಿ: ಅಭಿಲಾಷ್ .ಟಿ

contributor

Editor - ವರಧಿ: ಅಭಿಲಾಷ್ .ಟಿ

contributor

Similar News