×
Ad

ಮಂಡ್ಯ: ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಕೊಲೆ

Update: 2018-07-19 21:52 IST

ಮಂಡ್ಯ, ಜು.19: ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಗ್ರಾಮದ ಗುನ್ನಾಯಕನಹಳ್ಳಿ ಬಳಿ ನಡೆದಿದೆ.

ತಾಲೂಕಿನ ಕರಡಿಕೊಪ್ಪಲು ಗ್ರಾಮದ ಸ್ವಾಮಿ(41) ಕೊಲೆಯಾದವ. ಈತ ಗುರುವಾರ ಮುಂಜಾನೆ ಮಂಡ್ಯ ನಗರದ ಮಾರುಕಟ್ಟೆಗೆ ಹೂವು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಕೊಲೆಯನ್ನು ಅಪಘಾತದ ರೀತಿ ಬಿಂಬಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದು, ವಿದ್ಯುತ್ ಕಂಬದ ಬಳಿ ಮೃತ ದೇಹ ಹಾಗೂ ಬೈಕ್‍ನ್ನು ತಂದು ಹಾಕಿದ್ದಾರೆ ಎನ್ನಲಾಗಿದ್ದು, ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News