ಕೊಳ್ಳೇಗಾಲ: ವಕೀಲರ ಸಂಘದ ವತಿಯಿಂದ ಸಚಿವ ಎನ್.ಮಹೇಶ್ ರಿಗೆ ಸನ್ಮಾನ

Update: 2018-07-19 18:29 GMT

ಕೊಳ್ಳೇಗಾಲ,ಜು.19: ಪಟ್ಟಣದ ನ್ಯಾಯಾಲಯದ ಕಟ್ಟಡ ವಕೀಲರ ಸಭಾಂಗಣದಲ್ಲಿ ಗುರುವಾರ ವಕೀಲರ ಸಂಘದ ವತಿಯಿಂದ ಸಚಿವ ಎನ್.ಮಹೇಶ್ ಅವರಿಗೆ ಸನ್ಮಾನಿಸಲಾಯಿತು.

ನೂತನ ಸಚಿವರಿಗೆ ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಪ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು

ನಂತರ ಸಚಿವರು ಮಾತನಾಡಿ, ನಮ್ಮಲ್ಲಿ ಕ್ವಾಲಿಟಿ ಇಲ್ಲದ ಕಾರಣ ಜನರು ಸರ್ಕಾರಿ ಶಾಲೆಗಳನ್ನು ವಿರೋಧ ಮಾಡಿದ್ದಾರೆ. ಕಡಿಮೆ ಆದಾಯ ಹೊಂದಿರುವವರು ಕೂಡ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಖಾಸಗಿ ಶಾಲೆ ಸೇರಿಸುತ್ತಿದಾರೆ ಎಂದು ಹೇಳಿದರು.

ಪ್ರತಿ ಪಂಚಾಯತ್ ಗಳಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖಾಮುಖಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ನಡೆಸುವ ಮೂಲಕ ಕ್ಷೇತ್ರದ 2.5 ಲಕ್ಷ ಜನರಿಗೂ ಹೆಲ್ತ್ ಕಾರ್ಡ್ ನೀಡಲಾಗುವುದು. ಮುಂದಿನ ತಿಂಗಳು ಉದ್ಯೋಗ ಮೇಳ ಮಾಡುವ ಮೂಲಕ ಖಾಸಗಿಕರಣದಲ್ಲಿ ಯುವಕರಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.

ನಂತರ ವಕೀಲರ ಭವನ ನಿರ್ಮಾಣ, ಹನೂರಿನಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣದ ಜೊತೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು, ವಕೀಲರಿಗೆ ಆರೋಗ್ಯ ವಿಮೆ, ಗ್ರಂಥಾಲಯ, ಕಂಪ್ಯೂಟರ್ ವ್ಯವಸ್ಥೆ, ವಕೀಲರ ಸಂಘ ಹಾ ನ್ಯಾಯಾಲಯದ ಗ್ರೂೀಪ್ ಡಿ  ನೌಕರರ ಕನಿಷ್ಠ ವೇತನ ಜಾರಿ ಮಾಡುವಂತೆ ಒತ್ತಾಯಿಸಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಡಿ.ವಿನಯ್, ಎಸ್.ಜೆ ಕೃಷ್ಣ, ಟಿ.ಶ್ರೀಕಾಂತ್, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು, ಕಾರ್ಯದರ್ಶಿ ಎನ್.ಬಸವರಾಜು, ವಕೀಲರಾದ ಮಲ್ಲಿಕಾರ್ಜುನ, ಕೆಂಪರಾಜು, ಶಶಿಬಿಂಬ, ಮಾದಪ್ಪ, ರುದ್ರಾರದ್ಯ, ಮುತ್ತ್ತುರಾಜು, ಸಿ.ಮಹದೇವಸ್ವಾಮಿ, ಸೀಗರಾಜು ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News