ಹನೂರು: ವಲಯ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಸಾಹಸ ಶಿಬಿರಕ್ಕೆ ಚಾಲನೆ

Update: 2018-07-20 14:56 GMT

ಹನೂರು,ಜು.20: ವಿಕಲಚೇತನ ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಎರಡು ದಿನಗಳ ಕಾಲ ಸಾಹಸ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಡಯಟ್ ಪ್ರಾಂಶುಪಾಲರಾದ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವಶಿಕ್ಷಣ ಅಭಿಯಾನ, ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲಕೇಂದ್ರ ಹನೂರು ಇವುಗಳ ಸಹಯೋಗದಲ್ಲಿ ವಲಯ ಮಟ್ಟದ ವಿಶೇಷ ಅಗತ್ಯವುಳ್ಳ ಪ್ರಕೃತಿ ಅಧ್ಯಯನ ಮತ್ತು ಸಾಹಸ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗವಿಕಲರ ಮಕ್ಕಳ ಮನಸ್ಸುನ್ನು ನಿರಾಳಮಾಡಿ ಅವರ ಮನಸ್ಸಿನಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಎರಡು ದಿನಗಳ ಕಾಲ ಪ್ರಕೃತಿಯ ಮಡಿಲಲ್ಲಿ ಹಾಡು, ಚಿತ್ರ ಬಿಡಿಸುವುದರ ಮೂಲಕ ಬದುಕಿನ ಪ್ರತಿಕ್ಷಣಗಳನ್ನು ಅನುಭವಿಸುವಂತೆ ಮಾಡಲಾಗುತ್ತದೆ. ಇದು ವಿಕಲಚೇತನ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು 

ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ಶಿವರಾಮೇಗೌಡ್ರು, ಮಂಜುನಾಥ, ರಾಮಶೆಟ್ಟಿ ಬಿಇಒ ಟಿ. ಆರ್ ಸ್ವಾಮಿ, ಬಿಆರ್‍ಸಿ ಕ್ಯಾತ, ಬಿಆರ್‍ಪಿ ಆಶೋಕ್, ಬಿಐಇಆರ್‍ಟಿ ಕೃಷ್ಣ ಹಾಗೂ ಪ್ರಭಾರ ಮುಖ್ಯ ಶಿಕ್ಷಕ ಶಿವುನಾಯಕ್ ಸೇರಿದಂತೆ ಡಾಟ ಎಂಟ್ರಿ ಆಪರೇಟರ್ ಮಾದೇಶ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News