ಹನೂರು: ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Update: 2018-07-20 15:00 GMT

ಹನೂರು,ಜು.20: ಹನೂರು ತಾಲೂಕಿನ ಕೂಡುವಾಳೇ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ  ತಂಗಮಣಿ ವೇಲುಸ್ವಾಮಿ, ಉಪಾಧ್ಯಕ್ಷೆಯಾಗಿ ಪವಿತ್ರ ಬಸವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 13 ಮಂದಿ ಸದಸ್ಯರಿರುವ ಮಹಿಳಾ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ತಂಗಮಣಿ ವೇಲುಸ್ವಾಮಿ, ಉಪಾಧ್ಯಕ್ಷೆ  ಸ್ಥಾನಕ್ಕೆ ಪವಿತ್ರ ಬಸವಣ್ಣ ಹೊರತು ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ಹನೂರು ಬಿಆರ್‍ಪಿ ಹೆಚ್ ಕ್ಯಾತ ಮತ್ತು ಈ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಶರವಣಕುಮಾರ್ ಘೋಷಿಸಿದರು.  

ನಂತರ ಮಾತನಾಡಿದ ತಂಗಮಣಿ ವೇಲುಸ್ವಾಮಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೂಂಡು ಒಗ್ಗಟ್ಟಾಗಿ ಹಾಲು ಉತ್ಪಾದಕರ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು. 

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಮಹೇಶ್ವರಿ, ಕವಿತ, ಜಯಂತಿ, ಕನಕ, ಪವಿತ್ರ, ಮಲ್ಲಮ್ಮ , ಮಂಜುಳಾ ವನುಜ, ಸುಧಾ, ರಾಜಮಣಿ ಮತ್ತು ಸದಸ್ಯರಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News