×
Ad

ಮೈಸೂರು: ಇಬ್ಬರು ಅಂತರಾಜ್ಯ ಬೈಕ್‍ ಕಳ್ಳರ ಬಂಧನ

Update: 2018-07-20 21:50 IST

ಮೈಸೂರು,ಜು.20: ಬೈಕ್‍ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಬಂಧಿಸಿ, 8 ಲಕ್ಷ ರೂ. ಮೌಲ್ಯದ 7 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳದ ವಯನಾಡು ಜಿಲ್ಲೆಯ ತವಿನಿಯಲ್ ಗ್ರಾಮದ ವಿಷ್ಣು(19), ತೊಂಡರನಾಡ್ ಪೋಸ್ಟ್ ಪಿ.ಎಂ. ಶರ್ಫುದ್ದಿನ್(19) ಬಂಧಿತ ಅಂತಾರಾಜ್ಯ ಖದೀಮರು. ರಿಂಗ್‍ರಸ್ತೆಯ ಪುಪ್ಪಾಶ್ರಮ ಜಂಕ್ಷನ್ ಬಳಿ ನೋಂದಣಿ ಇಲ್ಲದ ಎರಡು ಬಜಾಜ್ ಪಲ್ಸರ್ ಎನ್.ಎಸ್.200 ಬೈಕ್‍ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಹೋಗಿ ಇವರು ಸಿಕ್ಕಿ ಬಿದ್ದಿದ್ದಾರೆ. 

ಪೊಲೀಸರು ಇವರಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಮಂಡಿ ಪೊಲೀಸ್ ಠಾಣೆ ಹಾಗೂ ಕೇರಳದ ವಿವಿಧ ಸ್ಥಳಗಳಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 

ಶೋಕಿಗಾಗಿ ಹಣದ ಅವಶ್ಯಕತೆ ಇದ್ದರಿಂದ ಬೈಕ್‍ಗಳ ಲಾಕ್‍ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದರೆಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News