ತಬ್ಬಿದ ರಾಹುಲ್- ತಬ್ಬಿಬ್ಬಾದ ಮೋದಿ!
Update: 2018-07-20 23:55 IST
ತೀವ್ರ ವಾಗ್ದಾಳಿಯಿಂದ ತತ್ತರಿಸಿದಂತಿದ್ದ ಮೋದಿಯ ಬಳಿ ಸಾಗಿದ ರಾಹುಲ್ ಗಾಂಧಿ ಅವರನ್ನು ಏಕಾಏಕಿ ತಬ್ಬಿಕೊಂಡ ಘಟನೆ ನಡೆಯಿತು. ಇದನ್ನು ನಿರೀಕ್ಷಿಸದ ಮೋದಿ ತಬ್ಬಿಬ್ಬಾದರು. ತಕ್ಷಣ ಚೇತರಿಸಿಕೊಂಡ ಅವರು ರಾಹುಲ್‌ಗಾಂಧಿಯವರ ಕೈ ಹಿಡಿದು ಪ್ರತಿಕ್ರಿಯಿಸಿದ್ದಾರೆ. ಅನಂತರ ರಾಹುಲ್ ಗಾಂಧಿ ಅವರು, ತನ್ನ ಸ್ಥಾನಕ್ಕೆ ಹಿಂದಿರುಗಿ ಕುಳಿತು ತನ್ನ ಪಕ್ಷದ ಸದಸ್ಯರತ್ತ ನೋಡಿ ಕಣ್ಣು ಮಿಟುಕಿಸಿದರು.