ಲಾರಿ ಮುಷ್ಕರ....
Update: 2018-07-20 23:57 IST
ದೇಶಾದ್ಯಂತ ಟೋಲ್ ಮುಕ್ತಗೊಳಿಸುವುದು, ಥರ್ಡ್‌ಪಾರ್ಟಿ ವಿಮಾ ಪಾಲಿಸಿ ದರ ಕಡಿತಗೊಳಿಸುವುದು, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿರುವುದರಿಂದ ಸರಕು ಸಾಗಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ರಾಜ್ಯ ಸೇರಿದಂತೆ ದೇಶಾದ್ಯಂತ 90 ಲಕ್ಷ ಸರಕು ಸಾಗಾಟದ ಲಾರಿಗಳು, ಗೂಡ್ಸ್ ವಾಹನಗಳು ರಸ್ತೆಗಿಳಿಯದೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸರಕು ಸಾಗಾಟದಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.