ಸಕಲೇಶಪುರ: ಕಾಡುಕೋಣ ದಾಳಿ; ವ್ಯಕ್ತಿಗೆ ಗಾಯ
Update: 2018-07-21 23:25 IST
ಸಕಲೇಶಪುರ,ಜು.21: ಕಾಡುಕೋಣ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಸಳೂರು ಹೋಬಳಿ ಬಾಣಗೇರಿ ಗ್ರಾಮದಲ್ಲಿ ನಡೆದಿದೆ.
ಸುಬ್ಬೆಗೌಡ(45) ಗಂಭೀರವಾಗಿ ಗಾಯಗೊಂಡರುವ ವ್ಯಕ್ತಿಯಾಗಿದ್ದಾರೆ. ಎಂದಿನಂತೆ ಕಾಫಿತೊಟದಲ್ಲಿ ಕೆಲಸಮಾಡುತ್ತಿದ್ದ ಸಂದರ್ಭ ಏಕಾಏಕಿ ಕಾಡುಕೋಣ ದಾಳಿ ಮಾಡಿದೆ. ಇದರಿಂದಾಗಿ ಎದೆ, ಎಡಗೈ, ಕಾಲುಗಳಿಗೆ ಗಾಯವಾಗಿದ್ದು, ಪಟ್ಟಣದ ಕ್ರಾಫ್ರರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.