ಕಲಬುರ್ಗಿ: ಜೂಜಾಡುತ್ತಿದ್ದ 14 ಶಿಕ್ಷಕರ ಬಂಧನ
Update: 2018-07-23 21:47 IST
ಕಲಬುರ್ಗಿ, ಜು.23: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಆರೋಪದಡಿ 14 ಶಿಕ್ಷಕರನ್ನು ಕಲಬುರ್ಗಿಯ ಆಲಂ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆಳಂ ಪಟ್ಟಣದ ಲಾಡ್ಜ್‌ವೊಂದನ್ನು ಬಾಡಿಗೆ ಪಡೆದು ಹಲವು ಶಿಕ್ಷಕರು ಕೊಠಡಿಯಲ್ಲಿ ಜೂಜಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
14 ಮಂದಿ ಶಿಕ್ಷಕರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 83 ಸಾವಿರ ನಗದು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.