×
Ad

ದಾವಣಗೆರೆ: ಕೇಂದ್ರ ಸಚಿವ ಹೆಗಡೆ ವಿರುದ್ಧ ದಲಿತರಿಂದ ಪ್ರತಿಭಟನೆ; 40ಕ್ಕೂ ಅಧಿಕ ಮಂದಿಯ ಬಂಧನ

Update: 2018-07-23 22:47 IST

ದಾವಣಗೆರೆ, ಜು.23: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ದಲಿತ ಸಂಘಟನೆಗಳ 40ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ನಗರದಲ್ಲಿ ಭಾನುವಾರ ಸಂಜೆ ಪೊಲೀಸರು ಬಂಧಿಸಿದರು.

ನಗರದ ಹದಡಿ ರಸ್ತೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ನಮೋ ಭಾರತ ಸಂಘಟನೆ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭಾಗವಹಿಸಲು ಆಗಮಿಸಲಿದ್ದ ಹಿನ್ನೆಲೆಯಲ್ಲಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿರುವ ಸರ್ಕ್ಯೂಟ್ ಹೌಸ್ ಬಳಿ ದಲಿತ ಸಂಘಟನೆ ಮುಖಂಡರು, ಕಾರ್ಯಕರ್ತರು ಹೆಗಡೆ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ಆರಂಭಿಸಿದರು.

ಅನಂತಕುಮಾರ ಹೆಗಡೆ ಬರುವ ಮುನ್ನವೇ ದಲಿತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರಲ್ಲದೇ, ಕೇಂದ್ರ ಸಚಿವ ಹೆಗೆಡೆ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 40ಕ್ಕೂ ಹೆಚ್ಚು ಜನರಿದ್ದ ದಲಿತ ಸಂಘಟನೆಯವರನ್ನು ಪೊಲೀಸರು ಸಾಮೂಹಿಕವಾಗಿ ಬಂಧಿಸಿ, ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದರು.

ದಲಿತ ಸಂಘಟನೆ ಪ್ರಮುಖ ಕುಂದುವಾಡ, ದಲಿತ ಸೇನಾ ರಾಜ್ಯಾಧ್ಯಕ್ಷ ಟಿ.ಎಚ್. ಬಸವರಾಜ ಇತರರ ನೇತೃತ್ವದಲ್ಲಿ ಪರಮೇಶ ಪುರದಾಳ ಕೆಟಿಜೆ ನಗರ, ಹೆಗ್ಗೆರೆ ರಂಗಪ್ಪ, ಜಿಗಳಿ ಹಾಲೇಶ, ನಿಟ್ಟೂರು ಕೃಷ್ಣಪ್ಪ, ಗುಂಡಗತ್ತಿ ಚಂದ್ರು, ತಿಪ್ಪೇಶ್ ತಿಮ್ಮೇನಹಳ್ಳಿ, ಎಂ.ಎಸ್. ಸಂಪತ್‌ಕುಮಾರ, ಶರಣಪ್ಪ, ಶಾಂತರಾಜ, ಮಂಜು ಕುಂದುವಾಡ, ತಿಪ್ಪೇಶ ಎರಲಬನ್ನಿಕೋಡು ಮತ್ತಿತರರನ್ನು ಪೊಲೀಸರು ಬಂಧಿಸಿದರು. ಬಳಿಕ ಬಂಧಿತರನ್ನು ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News