ಮೂಡಿಗೆರೆ: ನಿರಂತರ ಮಳೆಗೆ ಮನೆ ಗೋಡೆ ಕುಸಿತ

Update: 2018-07-24 12:31 GMT

ಮೂಡಿಗೆರೆ, ಜು.24: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಒಂದಿಲ್ಲೊಂದು ಅನಾಹುತ ಸಂಭವಿಸುತ್ತಲೇ ಇದ್ದು, ಪಟ್ಟಣದಲ್ಲಿ ಸೋಮವಾರ ರಾತ್ರಿ ಮನೆಯೊಂದರ ಗೋಡೆ ಕುಸಿದಿದೆ. 

ಇಲ್ಲಿನ ಜೆಎಂ ರಸ್ತೆ ಬಡಾವಣೆಯ ತತ್ಕೊಳ ರಸ್ತೆ ಬಳಿ ಫರೀದಾ ಸುಲ್ತಾನ್ ಎಂಬವರ ಮನೆಯ ಗೋಡೆ ಭಾಗಶಃ ಕುಸಿತಕ್ಕೊಳಗಾಗಿದೆ. ಮಳೆ ಹೆಚ್ಚಾದರೆ ಸಂಪೂರ್ಣ ಕುಸಿಯುವ ಅಪಾಯದಲ್ಲಿದೆ. ಮನೆಯ ಸದಸ್ಯರು ರಾತ್ರಿ ಮಲಗಿದ್ದಾಗ ಭಾರೀ ಮಳೆ ಗಾಳಿ ಪರಿಣಾಮ ಗೋಡೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮಂಗಳವಾರ ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News