×
Ad

ಹನೂರು: ಜಿ.ವಿ.ಗೌಡ ಪದವಿ ಪೂರ್ವ ಕಾಲೇಜ್ ಗೆ ಶಾಸಕ ನರೇಂದ್ರ ಭೇಟಿ

Update: 2018-07-24 22:30 IST

ಹನೂರು,ಜು.24: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿಯಲು ಶಾಸಕ ಆರ್.ನರೇಂದ್ರ ರಾಜುಗೌಡ ಪಟ್ಟಣದ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜಿಗೆ ಬೇಟಿ ನೀಡಿ ನಂತರ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕೆಲ ಕಾಲ ಸಂವಾದ ನಡೆಸಿದರು .

ಈ ವೇಳೆ ಕಾಲೇಜಿನ ಪ್ರಾಶುಂಪಾಲರಾದ ಪ್ರಮೋದ್ ಮಾತನಾಡಿ, ಮಳೆ ಬಂದರೆ ಚಾವಣಿಯಿಂದ ನೀರು ಸೋರಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ತೊಂದರೆಯಾಗುತ್ತದೆ. ಕಾಲೇಜಿನ ಕೊಠಡಿಗಳು ರಿಪೇರಿಗೆ ಬಂದಿದ್ದು, ಹೆಚ್ಚುವರಿ ಶೌಚಾಲಯದ ನಿರ್ಮಾಣ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುತ್ತುಗೋಡೆಯನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಇದೆ. ಹಾಗೆಯೇ ಕಾಲೇಜಿನ ಆವರಣದಲ್ಲಿ  ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲು ಪ್ರಾರಂಬಿಸಿ 5ರಿಂದ 6ವರ್ಷಗಳೇ ಆಗಿದ್ದು, ಅದು ಪೂರ್ಣಾವಾಗದೇ ಅರ್ಧಕ್ಕೆ ನಿಂತಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದ್ದರಿಂದ ಈ ಕೊಠಡಿಗಳನ್ನು ಪೂರ್ಣಗೊಳಿಸಿ, ಇಲ್ಲವೇ ತೆರವುಗೊಳಿಸಿಕೂಡಿ ಎಂದು ಶಾಸಕರಿಗೆ ಮನವಿ ಮಾಡಿದರು.

ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಶಾಸಕರು ಮಾತನಾಡಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ತಕ್ಷಣವೇ ಸರ್ಕಾರದ ಗಮನಕ್ಕೆ ತರಲಾಗುವುದು ಮತ್ತು ಹನೂರಿನ ಜಿ.ವಿ ಗೌಡ ಕಾಲೇಜಿನ ಜೊತೆಗೆ ಬಂಡಳ್ಳಿ ಪದವಿ ಪೂರ್ವ ಕಾಲೇಜಿಗೆ ಬೇಕಾದ ಸುತ್ತುಗೋಡೆ ಸೇರಿದಂತೆ ತುರ್ತಾಗಿ ಅವಶ್ಯಕತೆ ಇರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಅತೀ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  

ನಂತರ ಪ್ರತಿಯೊಂದು ತರಗತಿಗಳಿಗೆ ತೆರಳಿದ ಶಾಸಕರು ಕೆಲ ಕಾಲ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಈ ಸಂದರ್ಭ ತಾಪಂ ಅಧ್ಯಕ್ಷ ರಾಜು, ಪಪಂ ಅಧ್ಯಕ್ಷ ಜವಾದ್ ಅಹಮದ್, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್‍ ಅಹಮದ್, ಮುಖಂಡರಾದ ನಟರಾಜು, ರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News