ಮೈಸೂರು: ಪತ್ನಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-07-25 15:20 GMT

ಮೈಸೂರು,ಜು.25: ಪತ್ನಿಯನ್ನು ಕೊಲೆಗೈದ ಆರೋಪಿಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1000 ರೂ.ದಂಡ ವಿಧಿಸಿದೆ.

15 ವರ್ಷಗಳ ಹಿಂದೆ ಜಯರಾಮ ಹೊಳೆನರಸೀಪುರ ತಾಲೂಕಿನ ಗುಲಗಂಜಿಹಳ್ಳಿ ಗ್ರಾಮದ ರತ್ನಮ್ಮ ಎಂಬಾಕೆಯನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ನಿತ್ಯ ಮದ್ಯ ಸೇವಿಸಿ ಬಂದು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತಿದ್ದ ರತ್ನಮ್ಮ ಪತಿಯನ್ನು ತೊರೆದು ಮಕ್ಕಳೊಂದಿಗೆ ತವರಿಗೆ ಬಂದು ನೆಲೆಸಿದ್ದರು. ಜೀವನಾಂಶ ಕೋರಿ ಪತಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬಳಿಕ ಪುಸಲಾಯಿಸಿ ತನ್ನ ಜೊತೆ ಪತ್ನಿಯನ್ನು ಕರೆದೊಯ್ದಿದ್ದ ಜಯರಾಮ ಕತ್ತು ಹಿಸುಕಿ ಕೊಲೆ ಮಾಡಿದ್ದ ಎನ್ನಲಾಗಿದ್ದು, ಸಾಲಿಗ್ರಾಮ ಪೊಲೀಸರು ಆತನನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ ಎಂ.ಆನಂದ ಶೆಟ್ಟಿ ಆರೋಪಿ ಜಯರಾಮನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿದರು. ಸರ್ಕಾರದ ಪರವಾಗಿ ಅಜಿತ್ ಕುಮಾರ್ ಡಿ.ಹಮಿಗಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News