×
Ad

ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸದಿದ್ದರೆ ರಾಜಕೀಯ ನಿವೃತ್ತಿ: ಶಾಸಕ ಸುಬ್ಬಾರೆಡ್ಡಿ

Update: 2018-07-25 23:07 IST

ಬಾಗೇಪಲ್ಲಿ,ಜು.25: ಈ 5 ವರ್ಷದ ಅವಧಿಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಗೂಳೂರು ಹೋಬಳಿ ಚಿನ್ನಕಾಯಲಪಲ್ಲಿ ಗ್ರಾಮದ ಬಳಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರಿಗೆ ಏನಾದರೂ ಶಾಶ್ವತವಾಗಿ ಮಾಡಬೇಕೆಂದು ಸಂಕಲ್ಪ ಹೊಂದಿದ್ದು, ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸುತ್ತೇನೆ. ಒಂದು ವೇಳೆ ನೀರು ಹರಿಸಲು ಸಾಧ್ಯವಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುದಿಲ್ಲ ಎಂದು ಹೇಳಿದರು.

ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಸಲ ಆಯ್ಕೆಯಾದ ಶಾಸಕರು ಪುನರಾಯ್ಕೆ ಆಗಿಲ್ಲ. ಆದರೂ ಹಲವು ಮುಖಂಡರು ಸುಬ್ಬಾರೆಡ್ಡಿ ಸೋಲುತ್ತಾರೆ ಎಂದು ಘೋಷಿಸಿದ್ದರು. ಆದರೆ ಮತದಾರರು ನನ್ನನ್ನು ಮರು ಆಯ್ಕೆ ಮಾಡಿ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಎಂದೆಂದಿಗೂ ನಿಮ್ಮನ್ನು ಕೈ ಬಿಡುವುದಿಲ್ಲ ಎಂದರು.

ಈ ಸಂದರ್ಭ ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ಇಲಾಖೆಯ ಉಪ ಕೃಷಿ ನಿರ್ದೇಶಕಿ ಹೆಚ್.ಪಂಕಜಾರೆಡ್ಡಿ, ಸಹಾಯಕ ನಿರ್ದೇಶಕ ಡಿ.ಚಂದ್ರಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಬಾಲಕೃಷ್ಣ, ಬೈರರೆಡ್ಡಿ, ಅಮರನಾಥಬಾಬು, ರಾಮಲಿಂಗಾರೆಡ್ಡಿ, ಸಹಯಕ ಅಧಿಕಾರಿಗಳಾದ ಶಶಿಧರ್, ಕೆ.ಪ್ರಭು, ಗಂಗಾಧರರೆಡ್ಡಿ, ರವಿಚಂದ್ರಾರೆಡ್ಡಿ, ಮುಖಂಡರಾದ ಅಮರನಾಥರೆಡ್ಡಿ ನಂಜುಂಡರೆಡ್ಡಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News