×
Ad

ಮಂಡ್ಯ: ಖಾಸಗಿ ಬಸ್ ಉರುಳಿ ಓರ್ವ ಮೃತ್ಯು; ಹಲವರಿಗೆ ಗಾಯ

Update: 2018-07-26 20:22 IST

ಮಂಡ್ಯ, ಜು.26: ಚಾಲಕನ ನಿಯಂತ್ರಣ ಕಳೆದುಕೊಂಡು ಖಾಸಗಿ ಬಸ್ ಉರುಳಿ ಓರ್ವ ಸಾವನ್ನಪ್ಪಿ, ಸುಮಾರು 12 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕು ಗೂಳಿಕೆಂಪನದೊಡ್ಡಿ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.

ಮೃತಪಟ್ಟ ಪ್ರಯಾಣಿಕನನ್ನು ಮಹೇಶ್(38) ಎಂದು ಗುರುತಿಸಲಾಗಿದ್ದು, ಬಸವರಾಜು, ನಾರಾಯಣ, ಲಾವಣ್ಯ, ಲಕ್ಕಯ್ಯ, ಬಸವಮ್ಮಣ್ಣಿ ಸೇರಿದಂತೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಮಳವಳ್ಳಿಯಿಂದ ಕಿರುಗಾವಲು ಕಡೆಗೆ ತೆರಳುತ್ತಿದ್ದ ಬಸ್ ಚಾಲಕನ ಅಜಾಗರೂಕತೆಯಿಂದ ರಸ್ತೆಬದಿ ಉರುಳಿ ಬಿದ್ದಿತು ಎನ್ನಲಾಗಿದ್ದು, ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್‍ಕುಮಾರ್, ಎಎಸ್ಪಿ ಲಾವಣ್ಯ ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ಸಂಬಂಧ ಕಿರುಗಾವಬಲು ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News