ಪ್ರಗತಿಪರ ಚಿಂತಕ, ಹೋರಾಟಗಾರ, ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ ನಿಧನ

Update: 2018-07-26 17:36 GMT

ಮೈಸೂರು,ಜು.26: ಪ್ರಗತಿಪರ ಚಿಂತಕ, ಹೋರಾಟಗಾರ ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ (65) ತಮ್ಮ ನಿವಾಸದಲ್ಲಿ ಗುರುವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಹಲವಾರು ವರ್ಷಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು  ಕುವೆಂಪುನಗರದ ಪಡುವ ರಸ್ತೆಯಲ್ಲಿನ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.  ಮೃತರು ಪತ್ನಿ ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಸ್ನೇಹಿತರನ್ನು ಅಗಲಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರೊ. ಶಿವರಾಮು ಕಾಡನಕುಪ್ಪೆ ಹೆಸರುವಾಸಿ. ವಿಮರ್ಶಕ, ಕಾದಂಬರಿಗಾರ, ಕವಿ ಹಾಗೂ ಪ್ರಬಂಧಗಾರರಾಗಿ ಇವರು ಪ್ರಸಿದ್ಧರು. ಇವರು ಬರೆದಿರುವ ನಗರದ ಮಧ್ಯೆಯೇ ಇದ್ದು ತನ್ನತನವನ್ನು ಉಳಿಸಿಕೊಂಡ ಕುಕ್ಕರಹಳ್ಳಿ ದಲಿತ ಗ್ರಾಮದ ಬಗ್ಗೆ ಕುಕ್ಕರಹಳ್ಳಿ ಕೃತಿ ಇವರ ಬರವಣಿಗೆ ವಿಶಿಷ್ಟ ಶೈಲಿಗೆ ಹಿಡಿದ ಕನ್ನಡಿ. ಈ ಕೃತಿ ಈಗ ಮೈಸೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿದೆ.

ರಾಮನಗರ ಜಿಲ್ಲೆಯ ಕಾಡನಕುಪ್ಪೆ ಗ್ರಾಮದ ಶಿವಮ್ಮ ಹಾಗೂ ಲಿಂಗೇಗೌಡ ಅವರ ಮೊದಲ ಪುತ್ರರಾಗಿ 1953 ರ ಆಗಸ್ಟ್ 9 ರಂದು  ಜನಿಸಿದ ಪ್ರೊ. ಶಿವರಾಮು ಕಾಡನಕುಪ್ಪೆ ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾಗಿರುವ ಇವರಿಗೆ ಒಟ್ಟು 36 ವರ್ಷಗಳ ಅನುಭವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News