ಗ್ರಹಣದ ಬಗೆಗಿನ ಮೂಢನಂಬಿಕೆ ವಿರುದ್ಧ ಜಾಗೃತಿ: ಸ್ಮಶಾನದಲ್ಲೇ ಊಟ ಮಾಡಿದ ಪ್ರಗತಿಪರರು, ಸಾಹಿತಿಗಳು

Update: 2018-07-28 14:52 GMT

ಮೈಸೂರು,ಜು.28: ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಇತಿಹಾಸಕಾರ ಪ್ರೊ.ನಂಜರಾಜೇ ಅರಸ್ ಮತ್ತು ಪ್ರಗತಿಪರರ ತಂಡ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಊಟ ಮಾಡಿದ ಘಟನೆ ನಡೆದಿದೆ.

ಗ್ರಹಣ ಕಾಲದಲ್ಲಿ ಸ್ಮಶಾನದಲ್ಲಿಯೇ ವಾಸ ಮಾಡಿ, ಅಲ್ಲೇ ತಿಂಡಿ ತಿಂದು ಕಾಲ ಹರಣ ಮಾಡಿದರು. ಗ್ರಹಣದಿಂದ ಯಾವುದೇ ಕೆಡುಕು ಆಗುವುದಿಲ್ಲ ಎಂದು ಸಂದೇಶ ಸಾರಲು ಈ ಪ್ರಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

'ಗಡಿ ಕಾಯುವ ಯೋಧರಿಗೆ ಯಾವುದೇ ಅಮಾವಾಸ್ಯೆ, ಹುಣ್ಣಿಮೆ, ಪೀಡೆ ಇರುವುದಿಲ್ಲ. ಭೂಮಿ ನಿಂತಿರೋದು ವಿಜ್ಞಾನದಿಂದ, ಜ್ಯೋತಿಷ್ಯದಿಂದ ಅಲ್ಲ. ಗ್ರಹಣದಿಂದ ಏನೂ ಆಗಲ್ಲ. ಅದೊಂದು ಸಹಜ ಪ್ರಕ್ರಿಯೆ. ಬರುತ್ತೆ, ಹೋಗುತ್ತೆ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ಪ್ರಗತಿಪರ ಚಿಂತಕ ಮಾಜಿ ಮೇಯರ್ ಪುರುಷೋತ್ತಮ್, ಚಿಂತಕರಾದ ಭಾನುಮೋಹನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News